10ನೇ ಕ್ಲಾಸ್ 3 ಸಲ ಫೇಲ್: ನಟ ಕಮಲ್ ಹಾಸನ್ 2ನೇ ಪುತ್ರಿಗೆ ಇರೋದು ಇದೊಂದೇ ಗುರಿಯಂತೆ, ಏನದು?

Published : Oct 04, 2026, 08:45 AM IST
Akshara Haasan

ಸಾರಾಂಶ

ನಟ ಕಮಲ್ ಹಾಸನ್ ಅವರ ಕಿರಿಯ ಪುತ್ರಿ ಅಕ್ಷರ ಹಾಸನ್ ತಮ್ಮ ಓದು ಹಾಗೂ ಭವಿಷ್ಯದ ಗುರಿ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. 10ನೇ ತರಗತಿಯಲ್ಲಿ ಮೂರು ಬಾರಿ ಫೇಲ್ ಆಗಿದ್ದರೂ, ಸಿನಿಮಾ ನಿರ್ದೇಶಕಿಯಾಗುವುದೇ ತಮ್ಮ ಅಂತಿಮ ಗುರಿ ಎಂದು ಅವರು ಹೇಳಿಕೊಂಡಿದ್ದಾರೆ.

ಸ್ಟಾರ್ ಕಿಡ್ಸ್ ಅಂದಾಕ್ಷಣ ಸಿನಿಮಾ ರಂಗದಲ್ಲಿ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಒಂದೇ ರೀತಿಯ ಪರಿಸ್ಥಿತಿ ಇರುವುದಿಲ್ಲ ಎಂದು ನಟಿ ಅಕ್ಷರ ಹಾಸನ್ ಹೇಳಿದ್ದಾರೆ. ಕಮಲ್ ಹಾಸನ್ ಮತ್ತು ಸಾರಿಕಾ ದಂಪತಿಯ ಕಿರಿಯ ಪುತ್ರಿ ಹಾಗೂ ಶ್ರುತಿ ಹಾಸನ್ ತಂಗಿಯಾಗಿರುವ ಅಕ್ಷರ, ಇತ್ತೀಚೆಗೆ ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ತಮ್ಮ ಓದು, ಕೆರಿಯರ್ ಮತ್ತು ಫ್ಯಾಮಿಲಿ ಬಗ್ಗೆ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

10ನೇ ಕ್ಲಾಸ್‌ನಲ್ಲಿ 3 ಸಲ ಫೇಲ್..

ಅಕ್ಷರ ಹಾಸನ್ ತಮ್ಮ ಓದಿನ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಮಾತನಾಡಿದ್ದಾರೆ. ಹೈಸ್ಕೂಲ್ ದಿನಗಳಲ್ಲಿ ತಾನು ಓದಿನಲ್ಲಿ ಅಷ್ಟಾಗಿ ಮುಂದಿರಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಸತತ ಮೂರು ಬಾರಿ ಫೇಲ್ ಆದ ಬಳಿಕ, ಪಾಸ್ ಆಗುವುದು ತನ್ನಿಂದ ಸಾಧ್ಯವಿಲ್ಲ ಎಂದು ತಿಳಿದು ಓದನ್ನು ಅರ್ಧಕ್ಕೇ ಬಿಟ್ಟೆ ಎಂದು ಅವರು ಹೇಳಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಫೇಲ್ಯೂರ್ ಹೇಳಿಕೊಳ್ಳಲು ಹಿಂದೇಟು ಹಾಕುವ ಈ ಕಾಲದಲ್ಲಿ ಅಕ್ಷರ ಇಷ್ಟು ಓಪನ್ ಆಗಿ ಹೇಳಿಕೊಂಡಿರುವುದು ವಿಶೇಷ.

ಕೊರಿಯೋಗ್ರಾಫರ್‌ನಿಂದ ಅಸಿಸ್ಟೆಂಟ್ ಡೈರೆಕ್ಟರ್‌ವರೆಗೆ..

ದೊಡ್ಡ ಸ್ಟಾರ್ ಫ್ಯಾಮಿಲಿಯಿಂದ ಬಂದರೂ ತಾನು ನೇರವಾಗಿ ಹೀರೋಯಿನ್ ಆಗಲಿಲ್ಲ ಎಂದು ಅಕ್ಷರ ಹೇಳಿದ್ದಾರೆ. ಮೊದಲು ಡ್ಯಾನ್ಸ್ ಮೇಲಿನ ಆಸಕ್ತಿಯಿಂದ ಸ್ನೇಹಿತರ ಮ್ಯೂಸಿಕ್ ವಿಡಿಯೋಗಳಿಗೆ ಕೊರಿಯೋಗ್ರಫಿ ಮಾಡುತ್ತಾ ಕೆರಿಯರ್ ಶುರು ಮಾಡಿದರು. ಆಮೇಲೆ ಸಿನಿಮಾಗಳ ಮೇಲೆ ಆಸಕ್ತಿ ಬೆಳೆದು ನಿರ್ದೇಶನ ವಿಭಾಗದತ್ತ ಮುಖ ಮಾಡಿದರು. 'ಸೊಸೈಟಿ' ಮತ್ತು 'ಶಭಾಷ್ ನಾಯ್ಡು' ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಒಮ್ಮೆ ನಟನೆಯನ್ನೂ ಟ್ರೈ ಮಾಡೋಣ ಎಂದು 'ಶಮಿತಾಭ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದೆ, ಆದರೆ ನನ್ನ ಅಸಲಿ ಗುರಿ ಡೈರೆಕ್ಟರ್ ಆಗುವುದೇ ಆಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮನೆಯಲ್ಲಿ ಯಾವುದೇ ಒತ್ತಡವಿಲ್ಲ

ಭವಿಷ್ಯದಲ್ಲಿ ಖಂಡಿತಾ ಡೈರೆಕ್ಟರ್ ಆಗಿ ಸಿನಿಮಾ ಮಾಡುತ್ತೇನೆ ಎಂಬ ವಿಶ್ವಾಸವನ್ನು ಅಕ್ಷರ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್, ಸಾರಿಕಾ ಅವರಂತಹ ದಿಗ್ಗಜ ನಟರ ಮಕ್ಕಳಾಗಿರುವುದರಿಂದ ಸಿನಿಮಾಗೆ ಬರುವಂತೆ ನಿಮ್ಮ ಮೇಲೆ ಒತ್ತಡ ಇತ್ತಾ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. "ನಮ್ಮ ತಂದೆ-ತಾಯಿ ಎಂದಿಗೂ ನಮ್ಮನ್ನು ನಟರಾಗುವಂತೆ ಒತ್ತಾಯಿಸಲಿಲ್ಲ. ನಟನೆ ಇಷ್ಟವಿಲ್ಲದಿದ್ದರೆ ನಿಮಗೆ ಹಿಡಿಸಿದ ಕ್ಷೇತ್ರದಲ್ಲಿ ಸೆಟಲ್ ಆಗಬಹುದು ಎಂದು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಆ ಸ್ವಾತಂತ್ರ್ಯವೇ ನಮ್ಮ ಮೇಲಿದ್ದ ದೊಡ್ಡ ಭಾರವನ್ನು ಇಳಿಸಿತು" ಎಂದು ಅಕ್ಷರ ಕ್ಲಾರಿಟಿ ಕೊಟ್ಟಿದ್ದಾರೆ.

ಮುಖದ ಮೇಲೆಯೇ ವಿಮರ್ಶೆ ಮಾಡ್ತಾರೆ..

ತಮ್ಮ ಕುಟುಂಬದಲ್ಲಿ ಸಿನಿಮಾಗಳ ಬಗ್ಗೆ ತುಂಬಾ ಸೀರಿಯಸ್ ಹಾಗೂ ಪ್ರಾಮಾಣಿಕ ವಿಮರ್ಶೆಗಳು ಇರುತ್ತವೆ ಎಂದು ಅಕ್ಷರ ತಿಳಿಸಿದ್ದಾರೆ. ನಟನೆಯಲ್ಲಿ ತಪ್ಪು ಮಾಡಿದರೆ ಯಾವುದೇ ಮುಲಾಜಿಲ್ಲದೆ ಮುಖದ ಮೇಲೆಯೇ ವಿಮರ್ಶೆ ಮಾಡುತ್ತಾರೆ. ಹೊರಗಿನವರ ಹೊಗಳಿಕೆಗಿಂತ ಮನೆಯಲ್ಲಿ ಸಿಗುವ ಈ ಪ್ರಾಮಾಣಿಕ ವಿಮರ್ಶೆಗಳೇ ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಾಯ ಮಾಡುತ್ತವೆ ಎಂದು ಅವರು ವಿವರಿಸಿದ್ದಾರೆ. ಸದ್ಯ ಅಕ್ಷರ ಹಾಸನ್ ಮಾಡಿರುವ ಈ ಕಾಮೆಂಟ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಂಶಾಬಾದ್ ಬಳಿ ಐಷಾರಾಮಿ ವಿಲ್ಲಾ ಖರೀದಿಸಿದ ರಶ್ಮಿಕಾ-ವಿಜಯ್: ಬೇರೆ ಮನೆ ಮಾಡ್ತಿದ್ದಾರಾ?
ನಟ ಶಿವ ರಾಜ್‌ಕುಮಾರ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಿದ ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ!