
ಬೆಂಗಳೂರು (ಫೆ.14): ಅಶ್ವಿನಿ ನಕ್ಷತ್ರ ಖ್ಯಾತಿಯ ಜೆ ಕೆ ಬಿಗ್’ಬಾಸ್ ಮನೆಗೆ ಹೋಗಿ ಬಂದ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹುಡುಗಿಯರ ಡ್ರೀಮ್ ಬಾಯ್ ಆಗಿದ್ದಾರೆ. ವ್ಯಾಲಂಟೈನ್ಸ್ ಡೇ ದಿನ ಇವರ ಕನಸಿನ ಹುಡುಗಿ ಹೇಗಿರಬೇಕು ಎಂದು ಹೇಳಿದ್ದಾರೆ.
1. ನಮ್ಮನ್ನು ಅರ್ಥ ಮಾಡಿಕೊಳ್ಳುವವರು ಮುಖ್ಯ. ಹಾಗೆ ಅರ್ಥ ಮಾಡಿಕೊಳ್ಳುವಂತವರು ಸಿಕ್ಕರೆ ನಾವೂ ಕೂಡ ಅರ್ಥ ಮಾಡಿಕೊಂಡು ಬದುಕಲು ಸಾಧ್ಯ.
2. ಮಾತು ಬೆಳ್ಳಿ, ಮೌನವೇ ಬಂಗಾರ ಎನ್ನುವ ಸೂತ್ರ ನನ್ನದು. ಮಾತುಗಳು ಅಗತ್ಯದಷ್ಟಿರಬೇಕು. ಮಾತಿಗಿಂತ ಮೌನವೇ ಭೂಷಣದಂತಿರಬೇಕು.
3. ಬದುಕಲ್ಲಿ ಮಾನವೀಯ ಮೌಲ್ಯಗಳು ಮುಖ್ಯ. ಹಿರಿಯರನ್ನು ಗೌರವಿಸಬೇಕು, ಕಿರಿಯರನ್ನು ಪ್ರೀತಿಸಬೇಕು. ಸಂಸ್ಕೃತಿ ಅನ್ನೋದು ಆಚರಣೆಯಲ್ಲಿರಬೇಕು.
4. ಲೈಫ್ ಈಸ್ ಬ್ಯೂಟಿಫುಲ್ ಎನ್ನುವ ಹಾಗೆ ಅದು ಸಿಂಪಲ್ ಆಗಿಯೂ ಇರಬೇಕು. ಅನಗತ್ಯ ವಿವಾದಗಳಲ್ಲಿ ನೆಮ್ಮದಿ ಕಳೆದುಕೊಳ್ಳಬಾರದು.
5. ಓದು, ಕೆಲಸ, ಸಾಮಾಜಿಕ ಸೇವೆ ಅಥವಾ ನಟನೆ. ಯಾವುದೇ ಕ್ಷೇತ್ರದಲ್ಲಿ ಸಾಧಿಸಬೇಕೆನ್ನುವ ಮನಸ್ಸಿಗೆ ಮುಕ್ತ ಭಾವದಿಂದ ಬೆಂಬಲಿಸುವಂತಿರಬೇಕು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.