ವಿಶೇಷ ಅಭಿಮಾನಿ ಭೇಟಿ ಮಾಡಿದ ನಿರ್ದೇಶಕ ರಿಷಬ್ ಶೆಟ್ಟಿ

Published : Feb 03, 2020, 10:52 PM ISTUpdated : Feb 03, 2020, 11:05 PM IST
ವಿಶೇಷ ಅಭಿಮಾನಿ ಭೇಟಿ ಮಾಡಿದ ನಿರ್ದೇಶಕ ರಿಷಬ್ ಶೆಟ್ಟಿ

ಸಾರಾಂಶ

ಉತ್ತಮ ಚಿತ್ರ ಕೊಂಡಾಡಿ ಹಣ ಕಳಿಸಿದ್ದ ಅಭಿಮಾನಿಯ ಭೇಟಿ ಮಾಡಿದ ನಿರ್ದೇಶಕ ರಿಷಬ್ ಶೆಟ್ಟಿ/ 2018ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಚಿತ್ರ/ ವಿಶೇಷ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಅಭಿನಯ

ಮೈಸೂರು(ಫೆ. 03) ಅದ್ಭುತ ಚಿತ್ರ ಎಂದು ಹೇಳಿ ಹಣ ಕಳಿಸಿದ್ದ ಅಭಿಮಾನಿಯನ್ನು ನಟ, ನಿರ್ದೇಶಕ ರಿಷಬ್‍ ಶೆಟ್ಟಿ ಭೇಟಿಯಾಗಿದ್ದು, ಅಪರೂಪದ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.

ಸಹಿಪ್ರಾ ಶಾಲೆ ಕಾಸರಗೋಡು ಚಿತ್ರವನ್ನು ಕೊಂಡಾಡಿದ್ದ ಅಭಿಮಾನಿ ಭರತ್ ರಾಮಸ್ವಾಮಿಯನ್ನು ಭೇಟಿ ಮಾಡಿ ಮಾತನಾಡಿಸಿದ್ದಾರೆ. ಮೈಸೂರಿನ ಅಂಬೇಡ್ಕರ್ ರಸ್ತೆಯಲ್ಲಿ ಭರತ್ ರಾಮಸ್ವಾಮಿ ನಡೆಸುತ್ತಿರುವ ಸಮಾನತೆ ಪ್ರಕಾಶನ ಸಂಸ್ಥೆಗೆ ಭೇಟಿ ನೀಡಿ, ಪತ್ರ ಹಾಗೂ ಹಣ ಕಳುಹಿಸಿದ್ದಕ್ಕೆ ರಿಷಬ್ ಧನ್ಯವಾದ ತಿಳಿಸಿದ್ದಾರೆ.

ಶೆಟ್ಟರಿಗೆ ಸ್ವರ್ಣ ಕಮಲ, ಶುಭಾಶಯಗಳ ಮಹಾಪೂರ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನೋಡಿ 200 ರೂ. ಕಳುಹಿಸಿದ್ದ ಅಭಿಮಾನಿ ಭರತ್ ರಾಮಸ್ವಾಮಿರನ್ನ ಭೇಟಿ ಮಾಡಬೇಕು ಅಂತ ಯೋಚಿಸಿದ್ದೆ. ಈ ದಿನ ಅವರನ್ನು ಮಾತನಾಡಿಸಿದೆ ಎಂದು ಅಭಿಮಾನಿಗೆ ಧನ್ಯವಾದ ತಿಳಿಸಿದರು.

2018 ರಲ್ಲಿ ಬಿಡುಗಡೆಯಾದ ಚಿತ್ರ ಕನ್ನಡಿಗರಿಂದ ಭಾರೀ ಪ್ರಶಂಸೆಗೆ ಒಳಗಾಗಿತ್ತು. ಹಿರಿಯ ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರದ ತೂಕ ಮತ್ತಷ್ಟು ಹೆಚ್ಚು ಮಾಡಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನಿಮ್ಮ ಪ್ರೀತಿಯ ಪ್ರತಿ ಹನಿ ಅವರಿಗೆ ತಲುಪಿಸುತ್ತೇನೆ..' ಡೆವಿಲ್‌ ವೀಕ್ಷಿಸಿ ಮನತುಂಬಿ ಬರೆದ ವಿಜಯಲಕ್ಷ್ಮೀ ದರ್ಶನ್‌
ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸ್ಪರ್ಧಿ ಮೇಲೆ ಗಂಭೀರ ಆರೋಪ ಮಾಡಿದ ಡಿಸೈನರ್‌!