
ನಟ ಅಭಿಷೇಕ್ ಬಚ್ಚನ್ ಜೆಟ್ ಏರೆ'ವೇಸ್ ವಿಮಾನದಲ್ಲಿ ಪ್ರಯಾಣಿಸುವಾಗ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಮಾನದಲ್ಲಿ ಕುಳಿತುಕೊಂಡು ತುಂಬಾ ಸಮಯವಾದರೂ ಟೇಕ್ ಆಫ್ ಆಗಲಿಲ್ವಂತೆ. ಇದರಿಂದ ಸಿಡಿಮಿಡಿಗೊಂಡ ಜೂನಿಯರ್ ಬಚ್ಚನ್ ವಿಚಾರಿಸಿದಾಗ ಪೈಲೆಟ್ ಇರಲಿಲ್ಲ ಎಂಬ ಉತ್ತರ ನೀಡಿದ್ದಾರೆ. ತದ ನಂತರ ವಿಮಾನವು ಟೇಕ್ ಆಫ್ ಆಗಿದ್ದು, ಪ್ರಯಾಣ ಹೇಗಿದೆ ಎಂಬ ಪ್ರಶ್ನೆ ಕೇಳಲು ಬಂದ ಗಗನಸಖಿಗೆ 'ಟೇಕ್ ಆಫ್ ಆದ ಬಳಿಕ ನೆಮ್ಮದಿ ಸಿಕ್ಕಿತು' ಎಂದು ಖಾರವಾಗಿಯೇ ಉತ್ತರಿಸಿದ್ದಾರಂತೆ.
ಜೆಟ್ ಏರೆ'ವೇಸ್'ನ ಈ ಬೇಜವಾಬ್ದಾರಿತನಕ್ಕೆ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿ ಪ್ರಶ್ನೆಗಳ ಸುರುಮಳೆಯೊಂದಿಗೆ, ತಾನು ಸಿಬ್ಬಂದಿಗೆ ಉತ್ತರವನ್ನೂ ಟ್ವೀಟ್ ಮಾಡಿದ್ದಾರೆ ಅಭಿಷೇಕ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.