
ಬೆಂಗಳೂರು(ಅ.02): ಶ್ರೀ ಕೃಷ್ಣ ಪರಮಾತ್ಮ ಓಡಿಸಿದ ಬೈಕ್ ಈಗ ಭೂಲೋಕದಲ್ಲಿ ಹರಾಜಿಗಿದೆ!. ನಂಬಿ ಇದು ನಿಜ, ಈ ವಿಶೇಷ ವಾಹನವನ್ನು ಸ್ವತಃ ಶ್ರೀ ಕೃಷ್ಣನೇ ಹರಾಜಿಗಿಟ್ಟಿದ್ದಾನೆ!. 'ಅಂತೂ ಈ ಭೂಲೋಕ ದೇವರ ವಾಹನಗಳನ್ನು ಹರಾಜಿಗಿಟ್ಟಿತೇ? ಎಂಥ ಕಾಲ ಬಂತಪ್ಪಾ!' ಎಂದುಕೊಳ್ಳಬೇಡಿ. ಯಾಕೆಂದರೆ ಇದು ರೀಲ್ ದೇವರು! ಕಳೆದ ವಾರವಷ್ಟೇ ಉಪೇಂದ್ರ ಹಾಗೂ ಸುದೀಪ್ ನಡನೆಯಲ್ಲಿ 'ಮುಕುಂದ ಮುರಾರಿ' ಸಿನಿಮಾ ತೆರೆಗೆ ಬಂತು. ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಈ ಚಿತ್ರದಲ್ಲಿ ಸುದೀಪ್ ಮುರಾರಿ ಎನ್ನುವುದು ಎಲ್ಲರಿಗೂ ತಿಳಿದಿದೆ. ದೇವರನ್ನು ಬಯ್ಯುವ ನಾಸ್ತಿಕನ ಮನೆಗೆ ಬರುವ ಕೃಷ್ಣ ಪಾತ್ರ ಸುದೀಪ್ ಅವರದ್ದು. ಹೀಗೆ ದೇವಲೋಕದಿಂದ ಭೂಲೋಕಕ್ಕೆ ಬರುವ ಮುರಾರಿಗೆ ಚಿತ್ರದಲ್ಲಿ ವಿಶೇಷವಾದ ಬೈಕನ್ನು ಸಿದ್ಧ ಮಾಡಲಾಗಿತ್ತು.
ಇದೇ ಬೈಕ್ ಈಗ ಹರಾಜಿಗಿದೆ!. ಉಪೇಂದ್ರ-ಸುದೀಪ್ ಜಂಟೊಯಾಗಿ ಹರಾಜಿಗಿಟ್ಟಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಚಿತ್ರಮಂದಿರದ ಮುಂಭಾಗದಲ್ಲಿ ಈಗಾಗಲೇ ಈ ವಿಶೇಷ ಬೈಕನ್ನು ಪ್ರದರ್ಶನಕ್ಕಿಡಲಾಗಿದ್ದು, ಇದೇ ತಿಂಗಳಿನ 11ಕ್ಕೆ ಹರಾಜು ನಡೆಯಲಿದೆ. ವಿಶೇಷವಾಗಿ ಸುದೀಪ್'ಗಾಗಿಯೇ ಈ ಬೈಕನ್ನು ವಿನ್ಯಾಸ ಮಾಡಲಾಗಿತ್ತು. 35 ದಿನಗಳ ಅವಧಿಯಲ್ಲಿ 'ಮುಂಬೈ ಶಾಪರ್ಸ್' ಕಂಪೆನಿ ಇದನ್ನು ತಯಾರಿಸಿತ್ತು. 'ಚಿತ್ರದಲ್ಲಿನ ಸುದೀಪ್ ಪಾತ್ರ ಮತ್ತು ಬೈಕ್'ಗಳ ಮೇಲಿನ ಕಿಚ್ಚನ ಪ್ರೀತಿಯ ಬಗ್ಗೆ ಮುಂಬೈ ಕಂಪೆನಿಗೆ ವಿವರಿಸಿದ್ದೆವು. ನಮ್ಮ ಕಲ್ಪನೆಗಿಂತಲೂ ಚೆನ್ನಾಗಿ ಈ ಬೈಕನ್ನು ತಯಾರಿಸಲಾಗಿದೆ' ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್.
ಒಟ್ಟು 11 ಲಕ್ಷ ವೆಚ್ಚದಲ್ಲಿ ಈ ಬೈಕನ್ನು ತಯಾರಿಸಲಾಗಿದ್ದು, ಇದು ಎಷ್ಟು ಬೆಲೆಗೆ ಹರಾಜಾಗುತ್ತದೆ ಎಂಬುವುದನ್ನು ನ.11ರವರೆಗೆ ಕಾದು ನೋಡಬೇಕಷ್ಟೇ. ಆದರೆ ಈ ಬೈಕ್ ಹರಾಜಿನಲ್ಲಿ ಬಂದ ಹಣವನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಅನ್ನದಾಸೋಹಕ್ಕಾಗಿ ದಾನದ ರೂಪದಲ್ಲಿ ನೀಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ವಿತರಕ ಜಾಕ್ ಮಂಜುರವರ ಸಲಹೆ ಮೇರೆಗೆ ಚಿತ್ರತಂಡ ಈ ಬೈಕನ್ನು ಹರಾಜಿಗಿಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.