ಮಗಧೀರ ಚೆಲುವೆ ಕಾಜಲ್ ನಂಬಿ 60 ಲಕ್ಷ ರೂ ಪಂಗನಾಮ ಹಾಕಿಸಿಕೊಂಡ ಅಭಿಮಾನಿ

Published : Aug 03, 2019, 11:53 AM ISTUpdated : Aug 03, 2019, 11:56 AM IST
ಮಗಧೀರ ಚೆಲುವೆ ಕಾಜಲ್ ನಂಬಿ 60 ಲಕ್ಷ ರೂ ಪಂಗನಾಮ ಹಾಕಿಸಿಕೊಂಡ ಅಭಿಮಾನಿ

ಸಾರಾಂಶ

ನಟಿ ಕಾಜಲ್ ಅಗರ್‌ವಾಲ್ ಭೇಟಿ ಮಾಡಬೇಕೆಂಬ ಆಸೆಯಿಂದ 60 ಲಕ್ಷ ಕಳೆದುಕೊಂಡ ಅಭಿಮಾನಿ | ಅಭಿಮಾನಿಯನ್ನು ಮೋಸ ಮಾಡಿ 60 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು 

ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ನೆಚ್ಚಿನ ನಟಿಯನ್ನು ಭೇಟಿ ಮಾಡಬೇಕೆಂಬ ಆಸೆಯಿಂದ ಯುವಕನೊಬ್ಬ 60 ಲಕ್ಷ ಕಳೆದುಕೊಂಡಿದ್ದಾನೆ. 

ತಮಿಳುನಾಡಿನ ರಾಮನಾಥಪುರಂ ನ ಯುವಕನೊಬ್ಬ ನಟಿ ಕಾಜಲ್ ಅಗರ್ ವಾಲ್ ಅಪ್ಪಟ ಅಭಿಮಾನಿ. ಹೀಗೆ ಬ್ರೌಸ್ ಮಾಡುತ್ತಿದ್ದಾಗ ವೆಬ್ ಪೇಜೊಂದು ಓಪನ್ ಆಗುತ್ತೆ. ಅಲ್ಲಿ ನಿಮ್ಮ ನೆಚ್ಚಿನ ನಟಿಯನ್ನು ಭೇಟಿಯಾಗಬಹುದು ಎಂಬ ಜಾಹಿರಾತು ಕಣ್ಣಿಗೆ ಬೀಳುತ್ತದೆ. ಆಗ ಈ ಯುವಕ ಕಾಜಲ್ ಭೇಟಿ ಮಾಡುವ ಆಸೆಯಿಂದ ಅದನ್ನು ಕ್ಲಿಕ್ ಮಾಡುತ್ತಾನೆ. ಆಗ ಸೈಬಲ್ ವಂಚಕರು ಚಾಲಾಕಿತನ ತೋರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ 50 ಸಾವಿರ ಪೇಮೆಂಟ್ ಮಾಡಲು ಕೇಳುತ್ತಾರೆ ಜೊತೆಗೆ ಆತನ ವೈಯಕ್ತಿ ವಿವರವನ್ನು ಪಡೆದುಕೊಳ್ಳುತ್ತಾರೆ. 

ಆತ ಹಿಂದೂ ಮುಂದು ನೋಡದೇ 50 ಸಾವಿರ ಪೇ ಮಾಡುತ್ತಾನೆ.  ಒಂದು ಸಲ ಕೊಟ್ಟಿದ್ದೇ ತಡ ಮತ್ತೆ ಮತ್ತೆ ಕೊಡುವಂತೆ ಸೈಬರ್ ವಂಚಕರು ಬೇಡಿಕೆ ಇಡುತ್ತಾರೆ. ಈತ ನಿರಾಕರಿಸಿದಾಗ ಅವನ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಾರೆ. ಕೊನೆಗೆ 60 ಲಕ್ಷ ರೂಗಳನ್ನು ಮೂರು ಇನ್ಸ್ಟಾಲ್ ಮೆಂಟ್ ನಲ್ಲಿ ಪೇ ಮಾಡುತ್ತಾನೆ. ನಂತರ ಪೊಲೀಸರಿಗೆ ದೂರು ನೀಡುತ್ತಾನೆ. ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?