ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟು ಹಬ್ಬದ ಪ್ರಯುಕ್ತ ನಾಡಿನಾದ್ಯಾಂತ ಅದ್ಧೂರಿ ಸಂಭ್ರಮಾಚರಣೆ ನಡೆಯುತ್ತಿದೆ, ಡಾ. ವಿಷ್ಣು ಸೇನಾ ಸಮಿತಿ ಸ್ಮಾರಕ ಬಳಿ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಚಿಸಲಾಗಿದೆ.
ಸ್ಯಾಂಡಲ್ ವುಡ್ ಮೋಸ್ಟ್ ಎನರ್ಜಿಟಿಕ್ ಅ್ಯಂಡ್ ಕ್ರಿಯೇಟಿವ್ ಮ್ಯಾನ್ ಎಂದೇ ಖ್ಯಾತರಾದ ಸಾಹಸ ಸಿಂಹ ವಿಷ್ಣುವರ್ಧನ್ 59ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಸಂಘಗಳು ಅದ್ದೂರಿಯಾಗಿ ಆಚರಿಸುತ್ತಿವೆ. ಇನ್ನು ವಿಷ್ಣುದಾದನ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿವು......
undefined
- ಕನ್ನಡ ಚಿತ್ರರಂಗದ ಫೀನಿಕ್ಸ್ ಎಂದೇ ಖ್ಯಾತರಾಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರ ಶತ ದಿನ ಪೂರೈಸಿತ್ತು.
- ಒಟ್ಟಾರೆ 220 ಚಿತ್ರಗಳಲ್ಲಿ ನಟಿಸಿರುವ ವಿಷ್ಣುವನ್ನು CNN IBN 2008ರಲ್ಲಿ ಮೋಸ್ಟ್ ಪಾಪ್ಯೂಲರ್ ಕನ್ನಡ ನಟ ಎಂದು ಬಿರುದು ನೀಡಿ ಗೌರವಿಸಿದರು.
- ವಿಷ್ಣು ಅಸಲಿ ನಾಮ ಸಂಪತ್ ಕುಮಾರ್ ಎಂದು, ನಾಗರಹಾವು ಚಿತ್ರೀಕರಣದ ವೇಳೆ ಪುಟ್ಟಣ್ಣ ಕಣಗಲ್ ವಿಷ್ಣುವರ್ಧನ್ ಎಂದು ನಾಮಕರಣ ಮಾಡಿದ್ದರು.
- ಬಂಧನ ಚಿತ್ರದಲ್ಲಿ ಡಾ.ಹರೀಶ್ ಪಾತ್ರ ಎವರ್ ಗ್ರೀನ್ ಹಿಟ್ ಆಯ್ತು
- ನಿರ್ದೇಶಕ ಭಾರ್ಗವರೊಂದಿಗೆ ಅಸಾಧ್ಯ ಅಲಿಯಾ ಚಿತ್ರದಲ್ಲಿ ಮೂಲಕ ಕೈ ಜೋಡಿಸಿದ ವಿಷ್ಣು ಒಟ್ಟಾರೆ 23 ಚಿತ್ರದಲ್ಲಿ ಅವರಿಬ್ಬರ ಕಾಂಬಿನೇಷನ್ ಸಿನಿಮಾಗಳು ತೆರೆಕಂಡವು.
- 1980ರಲ್ಲಿ ಶಂಕರ್ ನಾಗ್ ಕನಸಿನ ಪ್ರಾಜೆಕ್ಟ್ ಆದ ಮಾಲ್ಗುಡಿ ಡೇಸ್ ಭಾಗವಾದ ‘Rupees Forty-Five a Month’ ಎಂಬ ಎಪಿಸೋಡ್ ನಲ್ಲಿ ನಟಿಸಿದ್ದರು.
- ನಾಗರಹಾವು ಚಿತ್ರದಿಂದ ಆಪ್ತರಕ್ಷಕ ಚಿತ್ರದವರಿಗೂ ಎಸ್.ಪಿ.ಬಾಲಸುಬ್ರಮಣ್ಯಂ ವಿಷ್ಣು ಚಿತ್ರದ ಹಾಡುಗಳಿಗೆ ಧ್ವನಿಯಾಗಿ ನಿಂತರು.
- ಸೇಹ್ನಿತ ಅಂಬರೀಶ್ ಅವರ ಪ್ರಕಾರ ವಿಷ್ಣುಗೆ ಶ್ವಾನಗಳೆಂದರೆ ಪಂಚಪ್ರಾಣ.
- ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿವರೆಗು ಇರುವ 14.5 ಕಿಮೀ ರಸ್ತೆಗೆ ವಿಷ್ಣುವರ್ಧನ್ ಹೆಸರು ಇಡಲಾಗಿದೆ.