ತಂದೆ ಆಯ್ತು, ಈಗ ಮಗ: ಜಯಪ್ರದಾರನ್ನು ಅನಾರ್ಕಲಿಗೆ ಹೋಲಿಸಿ ಆಜಂ ಪುತ್ರ ವಿವಾದ!

By Web DeskFirst Published 23, Apr 2019, 8:27 AM IST
Highlights

ನಮಗೆ ಅಲಿ, ಭಜರಂಗ ಬಲಿ ಸಾಕು ಅನಾರ್ಕಲಿ ಬೇಕಿಲ್ಲ| ಜಯಪ್ರದಾ ಬಗ್ಗೆ ಆಜಂ ಪುತ್ರ ವ್ಯಂಗ್ಯ

ಲಖನೌ[ಏ.23]: ರಾಂಪುರ ಬಿಜೆಪಿ ಅಭ್ಯರ್ಥಿ ಜಯಪ್ರದಾ ಕುರಿತು ಕೀಳು ಹೇಳಿಕೆಯನ್ನು ಸಮಾಜವಾದಿ ಪಕ್ಷದ ನಾಯಕರು ಮುಂದುವರಿಸಿದ್ದಾರೆ.

ಜಯಾಪ್ರದಾ ಒಳವಸ್ತ್ರದ ಬಗ್ಗೆ ಆಜಂ ಖಾನ್ ಕೀಳು ಹೇಳಿಕೆ: ಭಾರೀ ವಿವಾದ

‘ನಮಗೆ ಅಲಿ, ಭಜರಂಗಬಲಿ ಸಾಕು. ಅನಾರ್ಕಲಿ ನಮಗೆ ಬೇಡ’ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆಜಂ ಖಾನ್‌ ಪುತ್ರ ಅಬ್ದುಲ್ಲಾ ಆಜಂ ವ್ಯಂಗ್ಯವಾಡಿದ್ದಾರೆ. ಈ ಮೂಲಕ ನಟಿ ಜಯಪ್ರದಾರನ್ನು ಮೊಘಲರ ಆಸ್ಥಾನದಲ್ಲಿ ನರ್ತಕಿಯಾಗಿದ್ದ ಅನಾರ್ಕಲಿಗೆ ಹೋಲಿಸಿದ್ದಾರೆ. ಈ ಹೇಳಿಕೆ ಬಗ್ಗೆ ಜಯಪ್ರದಾ ಕಿಡಿಕಾರಿದ್ದಾರೆ.

SP leader Azam Khan's son Abdullah Khan's veiled attack at BJP candidate Jaya Prada in Rampur

"हमें अली भी चाहिए और बजरंगबली भी चाहिए लेकिन अनारकली नहीं चाहिए"

(We want Ali, we also want Bajrang Bali but we don't want Anaarkali) pic.twitter.com/N1OkTVnjSI

— Piyush Rai (@Benarasiyaa)

ಇದು ತಂದೆ- ಮಕ್ಕಳ ಸಂಸ್ಕೃತಿ ಮತ್ತು ಅವರು ಮಹಿಳೆಯರನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ತೋರ್ಪಡಿಸುತ್ತದೆ ಟೀಕಿಸಿದ್ದಾರೆ. ಇತ್ತೀಚಿಗೆ ಆಜಂ ಖಾನ್‌ ಅವರು ಜಯಪ್ರದಾ ‘ಖಾಕಿ ಒಳವಸ್ತ್ರ’ ಧರಿಸಿದ್ದಾರೆ ಎಂದಿದ್ದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

Last Updated 23, Apr 2019, 8:29 AM IST