ಮತಗಟ್ಟೆಯಲ್ಲಿ ಚಪ್ಪಲಿ ಧರಿಸಲು ಕೊಪ್ಪಳ ಮತದಾರರಿಗೆ ಅನುಮತಿ!

By Web DeskFirst Published Apr 23, 2019, 8:16 AM IST
Highlights

ಮತಗಟ್ಟೆಯಲ್ಲಿ ಚಪ್ಪಲಿ ಧರಿಸಲು ಕೊಪ್ಪಳ ಮತದಾರರಿಗೆ ಅನುಮತಿ!| ಪಕ್ಷೇತರನಿಗೆ ‘ಚಪ್ಪಲಿ’ ಚಿಹ್ನೆ ಸಿಕ್ಕಿದ್ದರಿಂದ ಗೊಂದಲ

ಕೊಪ್ಪಳ[ಏ.23]: ಮತದಾನ ಕೇಂದ್ರದ ಸುತ್ತ 100 ಮೀ. ವ್ಯಾಪ್ತಿಯಲ್ಲಿ ಅಭ್ಯರ್ಥಿಯ ಚುನಾವಣೆಯ ಚಿಹ್ನೆ ಇರುವಂತೆ ಇಲ್ಲ ಎಂಬ ಚುನಾವಣಾ ಆಯೋಗದ ನಿಯಮದಿಂದ ವಿವಾದಕ್ಕೀಡಾಗಿದ್ದ ‘ಚಪ್ಪಲಿ’ ಚಿಹ್ನೆ ಸಮಸ್ಯೆ ಈಗ ಬಗೆಹರಿದಿದೆ.

ಹೀಗಾಗಿ, ಮತದಾನ ಕೇಂದ್ರದಲ್ಲಿ ಸಿಬ್ಬಂದಿ ಚಪ್ಪಲಿಯನ್ನು ಧರಿಸಿಕೊಂಡು ಬರಬಹುದು ಮತ್ತು ಮತದಾರರು ಚಪ್ಪಲಿ ಧರಿಸಿಕೊಂಡೇ ಬಂದು ಮತ ಚಲಾಯಿಸಬಹುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್‌ ಅವರು ತಿಳಿಸಿದ್ದಾರೆ. ಅನೇಕ ಚಿಹ್ನೆಗಳು ಮತಗಟ್ಟೆಯಲ್ಲಿಯೇ ಇರುತ್ತವೆ. ಹೀಗಾಗಿ, ಇದಕ್ಕೆ ಅಂಥ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ.ಯ.ಗಣೇಶ ಅವರಿಗೆ ಚುನಾವಣೆ ಆಯೋಗ ಚಪ್ಪಲಿ ಚಿಹ್ನೆ ನೀಡಿದೆ.

ಚುನಾವಣೆ ಆಯೋಗದ ನಿಯಮಾನುಸಾರ ಮತಗಟ್ಟೆಯ 100 ಮೀ. ವ್ಯಾಪ್ತಿಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಯ ಚಿಹ್ನೆಯ (ಗುರುತು) ಇರುವಂತೆ ಇಲ್ಲ. ಹೀಗಾಗಿ ಮತಗಟ್ಟೆಸಿಬ್ಬಂದಿ ಚಪ್ಪಲಿ ತೊಟ್ಟುಕೊಂಡು ಬರಬಹುದಾ? ಅಥವಾ ಬರುವಂತಿಲ್ಲವೋ ಎಂಬ ಜಿಜ್ಞಾಸೆ ನಡೆದಿತ್ತು. ಈಗ ಚುನಾವಣಾಧಿಕಾರಿ ಪಿ. ಸುನೀಲ್‌ಕುಮಾರ ನಿರ್ಧಾರ ಪ್ರಕಟಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

click me!
Last Updated Apr 23, 2019, 8:16 AM IST
click me!