ವಿನಯ್ ಕುಲಕರ್ಣಿ ’ಕೈ’ ತಪ್ಪಿದ ಟಿಕೆಟ್; ಇವರಿಗಾಯ್ತು ಪಕ್ಕಾ!

By Web DeskFirst Published Mar 29, 2019, 11:30 AM IST
Highlights

ಬಿಜೆಪಿ ಭದ್ರಕೋಟೆ ಧಾರಾವಾಡದಲ್ಲಿ ವಿನಯ್ ಕುಲಕರ್ಣಿ ’ಕೈ’ ತಪ್ಪಿದ ಟಿಕೆಟ್ | ಶಕೀರ್ ಸನದಿಗೆ ಟಿಕೆಟ್ ಪಕ್ಕಾ! | ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ಭುಗಿಲೆದ್ದಿದೆ | 

ಹುಬ್ಬಳ್ಳಿ (ಮಾ. 29): ಬಿಜೆಪಿ ಭದ್ರಕೋಟೆ ಧಾರಾವಾಡದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಷಿಗೆ ಪ್ರತಿಸ್ಪರ್ಧಿಯಾಗಬಹುದೆಂದು ನಿರೀಕ್ಷಿಸಲಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಧಾರವಾಡ ಲೋಕಸಭಾ ಟಿಕೆಟ್ ’ಕೈ’ ತಪ್ಪಿದೆ. 

ಅಲ್ಪ ಸಂಖ್ಯಾತ ಕೋಟಾದಡಿ ಮಾಜಿ ಸಂಸದ ಐ.ಜಿ ಸನದಿ ಪುತ್ರ ಶಕೀರ್ ಸನದಿಗೆ ಧಾರವಾಡದ ಟಿಕೆಟ್ ಪಕ್ಕಾ ಆಗಿದೆ.  ವಿನಯ್ ಕುಲಕರ್ಣಿಗೆ ಟಿಕೆಟ್ ಕೈ ತಪ್ಪಿದಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ.  ಪಕ್ಷದ ಬೆಳವಣಿಗೆ ಬಗ್ಗೆ ಆಪ್ತರ ಬಳಿ ವಿನಯ್ ತೀವ್ರ ಅಸಮಾಧಾನ ತೊಡಿಕೊಂಡಿದ್ದಾರೆ. 

ಟಿಕೆಟ್ ಫೈಟ್: ಜೋಶಿ ವಿರುದ್ಧ ಮತ್ತೆ ಕುಲಕರ್ಣಿ ಅಖಾಡಕ್ಕೆ?

ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಇದು ಹೊಂದಿದೆ. ಎಂಟು ಕ್ಷೇತ್ರಗಳ ಪೈಕಿ ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರು ಇದ್ದಾರೆ. ಧಾರವಾಡ ಜಿಲ್ಲೆಯ ಐದು, ಹಾವೇರಿ ಜಿಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ. 

ಜೆಪಿಗೆ 22 ಸ್ಥಾನ ಬಂದ ಮರುದಿನವೇ ಎಚ್‌ಡಿಕೆ ಮನೆಗೆ: ಕಾಂಗ್ರೆಸ್ ನಾಯಕ

22 ವರ್ಷಗಳಿಂದ ಕಾಂಗ್ರೆಸ್‌ನ ಅಭ್ಯರ್ಥಿಗಳ್ಯಾರು ಇಲ್ಲಿ ಗೆಲುವ ಸಾಧಿಸಲು ಸಾಧ್ಯವಾಗಿಲ್ಲ. 1991ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ನಾಯ್ಕರ್‌ ಗೆಲುವು ಸಾಧಿಸಿದ್ದೇ ಕೊನೆ. 1996ರಿಂದ ಈ ಕ್ಷೇತ್ರ ಬಿಜೆಪಿ ವಶದಲ್ಲೇ ಇದೆ. ಜೋಶಿ ಎದುರಿಗೆ ಅತ್ಯಂತ ಪ್ರಬಲ ಅಭ್ಯರ್ಥಿಯನ್ನೇ ನಿಲ್ಲಿಸಿ ಈ ಸಲ ಹೇಗಾದರೂ ಮಾಡಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಹಂಬಲ ಕಾಂಗ್ರೆಸ್ಸಿನದು. ಹಾಗಾಗಿ ವಿನಯ್ ಕುಲಕರ್ಣಿಗಿಂತ ಐ.ಜಿ ಸನದಿ ಪುತ್ರ ಸನದಿಗೆ ಟಿಕೆಟ್ ನೀಡಿ ಟಫ್ ಫೈಟ್ ನೀಡುವುದು ಕಾಂಗ್ರೆಸ್ ಲೆಕ್ಕಾಚಾರ. 

click me!