ದೇವೇಗೌಡರ ಕುಟುಂಬಕ್ಕೆ ಶುಭ ಸಂಖ್ಯೆಯಿದು : ರೇವಣ್ಣ

By Web DeskFirst Published Mar 29, 2019, 10:49 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ಪಕ್ಷಗಳಲ್ಲಿ ಗೆಲುವಿಗಾಗಿ ಕಸರತ್ತು ನಡೆಯುತ್ತಿದೆ. ಇದೇ ವೇಳೆ 9 ದೇವೇಗೌಡರ ಕುಟುಂಬಕ್ಕೆ ಕಂಟಕ ಎಂಬ ಎ. ಮಂಜು ಹೇಳಿಕೆಗೆ ಇದೀಗ ರೇವಣ್ಣ ಪ್ರತಿಕ್ರಿಯಿಸಿ ಈ ಸಂಖ್ಯೆ ನಮ್ಮ ಕುಟುಂಬಕ್ಕೆ ಶುಭ ಎಂದಿದ್ದಾರೆ. 

ಹಾಸನ: ಸಂಖ್ಯೆ ‘9’ ನಮಗೆ ಕಂಟಕವಲ್ಲ, ಶುಭ ಸೂಚನೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ವ್ಯಾಖ್ಯಾನ ಮಾಡಿದ್ದಾರೆ.

ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ, ಬಿಜೆಪಿ ಅಭ್ಯರ್ಥಿ ಎ.ಮಂಜು ‘9’ ದೇವೇಗೌಡರ ಕುಟುಂಬಕ್ಕೆ ಕಂಠಕ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, 2018ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ, ರಾಮನಗರ ಕ್ಷೇತ್ರದಿಂದ ಗೆದ್ದಿದ್ದೇವೆ. 2018ರ ಕಡೆಯ ಎರಂಡಕಿಗಳು, ಅಂದರೆ 1 ಮತ್ತು 8ನ್ನು ಕೂಡಿದರೆ 9 ಆಗಲಿದೆ. ಹೀಗಾಗಿ 9 ನಮಗೆ ಶುಭ ಸೂಚನೆ ಎಂದು ವಿವರಣೆ ನೀಡಿದರು.

ಗೌಡರ ಕುಟುಂಬಕ್ಕೆ ಕಂಟಕ:  9 ಅನ್ನೋದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ಕಂಟಕ. 1989, 1999ರಲ್ಲಿ ದೇವೇಗೌಡರು ಸೋಲುಂಡಿದ್ದರು. 2019ರಲ್ಲೂ ಸೋಲಾಗಲಿದೆ. ಈ ಬಾರಿ ಲೋಕಸಭಾ ಚುನಾವಣಾ ದಿನಾಂಕವೂ ಕೂಡಾ 18 ಬಂದಿದೆ. 8 ಮತ್ತು 1ನ್ನು ಕೂಡಿದರೆ 9 ಆಗಲಿದೆ. ಹೀಗಾಗಿ ಅವರಿಗೆ 9 ಅನ್ನೋದು ಕಂಟಕವಾಗಿದೆ ಎಂದು ಹೇಳಿದ್ದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!