ಮಂಡ್ಯದಲ್ಲೇ ಠಿಕಾಣಿ ಹೂಡಿದ ಕುಮಾರಸ್ವಾಮಿ, ಅತ್ತ ವಿಜಯಪುರದಲ್ಲಿ JDSಗೆ ಮರ್ಮಾಘಾತ

By Web Desk  |  First Published Apr 14, 2019, 7:10 PM IST

ರಾಜ್ಯದಲ್ಲಿ ಲೋಕಸಭಾ ಚುನಾವಣೆ ದಿನ ದಿನಕ್ಕೆ ರಂಗೇರುತ್ತಲೇ ಇದ್ದು, ಮತದಾನಕ್ಕೆ ದಿನಗಣನೇ ಆರಂಭವಾಗಿದೆ, ಇದರ ನಡುವೆ ವಿಜಯಪುರದಲ್ಲಿ ಜೆಡಿಎಸ್ ಗೆ ಆಘಾತವಾಗಿದೆ.


ವಿಜಯಪು, [ಏ.14]: ಪುತ್ರನ ಗೆಲುವಿಗಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಅತ್ತ ವಿಜಯಪುರದಲ್ಲಿ ಜೆಡಿಎಸ್ ಗೆ ಹಿನ್ನಡೆಯಾಗಿದೆ.

ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾ ಪಾಟೀಲ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸಮ್ಮುಖದಲ್ಲಿ  ವಿದ್ಯಾ ಪಾಟೀಲ ಇಂದು [ಭಾನುವಾರ] ಬಿಜೆಪಿ ಸೇರಿದರು. ಚುನಾವಣೆ ಹೊಸ್ತಿಲಲ್ಲಿ ಪಕ್ಷ ತೊರೆದಿರುವುದು ಜೆಡಿಎಸ್ ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳಿವೆ. 

Latest Videos

undefined

ಸೀಟು ಹಂಚಿಕೆಯಲ್ಲಿ ಜೆಡಿಎಸ್ ವಿಜಯಪುರ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದ್ರೆ, ಈವರೆಗೂ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಆಗಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಲಿ ತಮ್ಮ ಅಭ್ಯರ್ಥಿ ಡಾ.ಸುನಿತಾ ಚೌಹಾಣ್‌ ಪರ ಪ್ರಚಾರಕ್ಕೆ ವಿಜಯಪುರದತ್ತ ಸುಳಿದಿಲ್ಲ.

ಪುತ್ರನನ್ನು ಗೆಲ್ಲಿಸಿಕೊಳ್ಳಲು ಕುಮಾರಸ್ವಾಮಿ ಮಂಡ್ಯದಲ್ಲಿ ಬ್ಯುಸಿಯಾದ್ದರೆ, ಮತ್ತೊಂದೆಡೆ ದೇವೇಗೌಡ್ರು ತಾವು ಗೆಲ್ಲಲು ತುಮಕೂರಿನಲ್ಲಿ ಬೀಡುಬಿಟ್ಟಿದ್ದಾರೆ. ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಕಷ್ಟಕರವಾಗಿದೆ.ಈ ಹಿನ್ನಲೆಯಲ್ಲಿ ಜೆಡಿಎಸ್ ನ ಪ್ರಮುಖ ನಾಯಕರು ಹೆಚ್ಚಾಗಿ ಈ ಎರಡು ಕ್ಷೇತ್ರಗಳಿಗೆ ಮಾತ್ರ ಆಧ್ಯತೆ ನೀಡುತ್ತಿದ್ದಾರೆ.

ರಾಜ್ಯದ ಪೈಕಿ ವಿಜಯಪುರ ಕ್ಷೇತ್ರಕ್ಕೆ 2ನೇ ಹಂತದಲ್ಲಿ ಮತದಾನ [ಏ.23] ನಡೆಯಲಿದ್ದು, ಮೇ 23ಕ್ಕೆ ಮತ ಎಣಿಕೆ ನಡೆಯಲಿದೆ.

click me!