‘ಅಧಿಕಾರಕ್ಕಾಗಿ ಹಿಂದೂ ಧರ್ಮವನ್ನು ಹಿಂಸಾತ್ಮಕವನ್ನಾಗಿಸಲಾಗಿದೆ’!

Published : Apr 06, 2019, 02:48 PM ISTUpdated : Apr 06, 2019, 02:51 PM IST
‘ಅಧಿಕಾರಕ್ಕಾಗಿ ಹಿಂದೂ ಧರ್ಮವನ್ನು ಹಿಂಸಾತ್ಮಕವನ್ನಾಗಿಸಲಾಗಿದೆ’!

ಸಾರಾಂಶ

‘ಅಧಿಕಾರದ ಆಸೆಗಾಗಿ ಹಿಂದೂ ಧರ್ಮದ ತಿರುಳು ತಿರುಚಲಾಗಿದೆ’ ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ಗಂಭೀರ ಆರೋಪ|  ‘ಸನಾತನ ಧರ್ಮವನ್ನು ಹಿಂಸಾತ್ಮಕ ಧರ್ಮವನ್ನಾಗಿ ಪರಿವರ್ತಿಸಲಾಗಿದೆ’|ಸುಳ್ಳು ನಂಬಿಕೆಗಳ ಮೂಲಕ ಸಮಾಜವನ್ನು ಒಡೆಯುವ ಹುನ್ನಾರ ಎಂದ ಊರ್ಮಿಳಾ ಮಾತೋಂಡ್ಕರ್| ಪ್ರಧಾನಿ ಮೋದಿ ಅವರದ್ದು ಸರ್ವಾಧಿಕಾರಿ ಧೋರಣೆ ಎಂದು ಹರಿಹಾಯ್ದ ಊರ್ಮಿಳಾ|

ಮುಂಬೈ(ಏ.06): ಸಹಿಷ್ಣುತೆಯ ಪ್ರತೀಕವಾಗಿದ್ದ ಸನಾತನ ಹಿಂದೂ ಧರ್ಮವನ್ನು ಅಧಿಕಾರದ ಆಸೆಗಾಗಿ ಉದ್ದೇಶಪೂರ್ವಕಾಗಿ ಹಿಂಸಾತ್ಮಕ ಧರ್ಮವನ್ನಾಗಿ ಪರಿವರ್ತಿಸಲಾಗಿದೆ ಎಂದು ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ಸೇರಿರುವ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

ಅಧಿಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಶಾಂತಿಯ ಸಂಕೇತವಾಗಿದ್ದ ಹಿಂದೂ ಧರ್ಮವನ್ನು ಹಿಂಸಾತ್ಮಕ ಧರ್ಮವನ್ನಾಗಿ ಮಾರ್ಪಡಿಸಿದ್ದಾರೆ ಎಂದು ಊರ್ಮಿಳಾ ಹೇಳಿದ್ದಾರೆ.

ಹಿಂದೂ ಧರ್ಮದ ಶಾಂತಿಯುತ ಇತಿಹಾಸವನ್ನು ಕೇವಲ ಅಧಿಕಾರಕ್ಕಾಗಿ ಹಿಂಸಾತ್ಮಕ ಇತಿಹಾಸವನ್ನಾಗಿ ಪರಿವರ್ತಿಸಲಾಗಿದೆ ಎಂದು ಊರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ.

ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನಾವಳಿಗಳನ್ನು ಆಡಳಿತ ಪಕ್ಷವೇ ಸಮರ್ಥಿಸಿಕೊಳ್ಳುತ್ತಿದ್ದು, ನಮ್ಮ ಸಮಾಜ ಹಿಂದಿನಿಂದಲೂ ಹೀಗೆ ಇತ್ತು ಎಂಬ ಸುಳ್ಳು ನಂಬಿಕೆಯನ್ನು ಹರಡಲಾಗುತ್ತಿದೆ ಎಂದು ಊರ್ಮಿಳಾ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯನ್ನು ಸರ್ವಾಧಿಕಾರಕ್ಕೆ ಹೋಲಿಸಿರುವ ಊರ್ಮಿಳಾ, ಇದು ದೇವನ್ನು ಅರಾಜಕತೆಯತ್ತ ದೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಊರ್ಮಿಳಾ ಮಾತೋಂಡ್ಕರ್ ನಾಮಪತ್ರ ಸಲ್ಲಿಸಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!