ಊರ್ಮಿಳಾ 'ಕೈ'ಸೇರಿದ ಟಿಕೆಟ್: ಉತ್ತರಕ್ಕೆ ಅವರೇ ಅಂತೆ ಪರ್ಫೆಕ್ಟ್!

Published : Mar 29, 2019, 02:47 PM IST
ಊರ್ಮಿಳಾ 'ಕೈ'ಸೇರಿದ ಟಿಕೆಟ್: ಉತ್ತರಕ್ಕೆ ಅವರೇ ಅಂತೆ ಪರ್ಫೆಕ್ಟ್!

ಸಾರಾಂಶ

ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಸೇರುತ್ತಿದ್ದಂತೇ 'ಕೈ'ಸೇರಿದ ಟಿಕೆಟ್| ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಊರ್ಮಿಳಾ ಕಣಕ್ಕೆ| ಕಾಂಗ್ರೆಸ್ ಕೇಂದ್ರೀಯ ಸಮಿತಿ ಸಭೆಯಲ್ಲಿ ನಿರ್ಧಾರ| ಬಿಜೆಪಿಯ ಹಾಲಿ ಸಂಸದ ಗೋಪಾಲ್‌ ಶೆಟ್ಟಿ ವಿರುದ್ಧ ಊರ್ಮಿಳಾ ಸ್ಪರ್ಧೆ|

ಮುಂಬೈ(ಮಾ.29): ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಪಕ್ಷ ಮುಂಬೈ ಉತ್ತರ ಲೋಕಸಭಾದಿಂದ ಟಿಕೆಟ್ ನೀಡಿದೆ.

ಕಾಂಗ್ರೆಸ್ ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಊರ್ಮಿಳಾ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.

ಈ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ ಗೋಪಾಲ್‌ ಶೆಟ್ಟಿ ವಿರುದ್ಧ ಊರ್ಮಿಳಾ ಸೆಣೆಸಲಿದ್ದು, ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಅಖಾಡ ರಂಗೇರಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಊರ್ಮಿಳಾ, ದ್ವೇಷದ ರಾಜಕೀಯ ವಾತಾವರಣ ತೊಡೆದು ಹಾಕಲು ರಾಜಕಾರಣಕ್ಕೆ ಬಂದಿರುವುದಾಗಿ ತಿಳಿಸಿದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!