ತೇಜಸ್ವಿ ಸೂರ್ಯ ಮಿಂಚಿನ ಸಂಚಾರ

Published : Apr 04, 2019, 08:55 AM IST
ತೇಜಸ್ವಿ ಸೂರ್ಯ ಮಿಂಚಿನ ಸಂಚಾರ

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಅಭ್ಯರ್ಥಿಗಳು ಸಕತ್ ಆ್ಯಕ್ಟಿವ್ ಆಗಿದ್ದಾರೆ. ಎಲ್ಲೆಡೆ ಮಿಂಚಿನ ಸಂಚಾರ ಮಾಡಿ ಮತ ಯಾಚಿಸುತ್ತಿದ್ದಾರೆ. ಇತ್ತ ಯಂಗ್ ಲೀಡರ್ ತೇಜಸ್ವಿ ಸೂರ್ಯ ಕೂಡ ಪ್ರಚಾರದಲ್ಲಿ ಭರ್ಜರಿಯಾಗಿ ತೊಡಗಿಸಿಕೊಂಡಿದ್ದಾರೆ. 

ಬೆಂಗಳೂರು :  ಬಿರುಸಿನ ಪ್ರಚಾರ ಆರಂಭಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ನೂತನ ಚುನಾವಣಾ ಕಾರ್ಯಾಲಯವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದರು.

ನಗರದ ಬಸವನಗುಡಿಯ ಅಂಚೆ ಕಚೇರಿಯ ಹಿಂಭಾಗದಲ್ಲಿರುವ ಮನೆಯಲ್ಲಿ ಪೂಜೆ, ಹೋಮ ಹವನವನ್ನು ನೆರೆವೇರಿಸುವ ಮೂಲಕ ಚುನಾವಣಾ ಕಾರ್ಯಾಲಯವನ್ನು ಆರಂಭಿಸಿದರು.

ಈ ವೇಳೆ ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಂತರ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್‌ ರೆಡ್ಡಿ ಅವರೊಂದಿಗೆ ಅಲ್ಲಿನ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯನ್ನು ಕೈಗೊಂಡು ಸದೃಢ ಭಾರತಕ್ಕಾಗಿ ನರೇಂದ್ರ ಮೋದಿಯ ಅವರನ್ನು ಪುನರಾಯ್ಕೆ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡುತ್ತಾ ಮಿಂಚಿನ ಸಂಚಾರ ಮಾಡಿದರು.

ಬಳಿಕ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳಿಗೆ ತೆರಳಿ ಅಲ್ಲಿನ ಕಾರ್ಮಿಕರ ಕುಂದು ಕೊರತೆಗಳಿಗೆ ಧ್ವನಿಯಾಗುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕರ ಹಿತದೃಷ್ಟಿಯಿಂದ ತೆಗೆದುಕೊಂಡ ಕಾರ್ಯಕ್ರಮಗಳ ಬಗೆಗೆ ವಿವರಿಸಿದರು.

ಮಹಿಳಾ ಕಾರ್ಮಿಕರ ಆರೋಗ್ಯ, ಭದ್ರತೆ, ಏಳಿಗೆ, ಯಶಸ್ಸುಗಳ ಕುರಿತಾಗಿ ಸರ್ಕಾರ ತೆಗೆದುಕೊಳ್ಳಬಹುದಾದ ಕ್ರಮಗಳ ಬಗೆಗೆ ಚರ್ಚಿಸಿದ ಅವರು ಮಹಿಳೆಯರು ಪ್ರಸ್ತಾಪಿಸಿದ ಮಾಲೀಕರ ಅನುಚಿತ ನೀತಿ, ಭದ್ರತಾ ವೈಫಲ್ಯ, ಪಿಎಫ್‌, ಇಎಸ್‌ಐ, ವೇತನ ತಾರತಮ್ಯಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದರು.

ಆದಾದ ಬಳಿಕ ತೇಜಸ್ವಿ ಅವರು ಬಸವನಗುಡಿಯ ಕೆ.ಅರ್‌.ರಸ್ತೆಯ ಆಂಬಿಯನ್ಸ್‌ ಪ್ಲಾಟಿನಂನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಜೈನ ಸಮುದಾಯದವನ್ನು ಉದ್ದೇಶಿಸಿ ಮಾತನಾಡಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!