'ಈಶ್ವರಪ್ಪನ ನಾಲಿಗೆಗೂ ಬ್ರೈನ್‌ಗೂ ಲಿಂಕ್‌ ತಪ್ಪಿದೆ'

Published : Apr 04, 2019, 08:42 AM IST
'ಈಶ್ವರಪ್ಪನ ನಾಲಿಗೆಗೂ ಬ್ರೈನ್‌ಗೂ ಲಿಂಕ್‌ ತಪ್ಪಿದೆ'

ಸಾರಾಂಶ

ಕುಮಾರಸ್ವಾಮಿ ನೆಗೆದು ಬೀಳ್ತಾರೆ ಎಂದಿದ್ದ  ಈಶ್ವರಪ್ಪ ವಿರುದ್ಧ ಮೈತ್ರಿ ನಾಯಕರ ಆಕ್ರೋಶ| ನಾಲಿಗೆಗೂ ಬ್ರೈನ್‌ಗೂ ಲಿಂಕ್‌ ತಪ್ಪಿದೆ: ಸಿದ್ದರಾಮಯ್ಯ ಕಿಡಿ

ಬಾಗಲಕೋಟೆ[ಏ.04]: ಕುಮಾರಸ್ವಾಮಿ ನೆಗೆದು ಬಿದ್ದು ಹೋಗುತ್ತಾರೆಂಬ ಈಶ್ವರಪ್ಪ ಹೇಳಿಕೆ ಅವರಲ್ಲಿರುವ ಕಲ್ಚರ್‌ ತೋರಿಸುತ್ತೆ. ಅದಕ್ಕೆ ನಾನು ಹೇಳುವುದು, ಈಶ್ವರಪ್ಪನ ನಾಲಿಗೆಗೂ ಬ್ರೈನ್‌ಗೂ ಲಿಂಕ್‌ ತಪ್ಪಿಹೋಗಿದೆ. ಅದಕ್ಕೆ ಹಾಗೆ ಮಾತನಾಡುತ್ತಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾದಾಮಿಯ ಹೆಲಿಪ್ಯಾಡ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧಿಕಾರದ ದಾಹದಲ್ಲಿರುವ ಯಡಿಯೂರಪ್ಪ ಯಾವಾಗಲೂ ಮುಖ್ಯಮಂತ್ರಿಯ ಕುರ್ಚಿಯೊಂದೆ ಕಾಣುತ್ತಿದೆ. ಮುಖ್ಯಮಂತ್ರಿಯಾಗಬೇಕೆಂಬ ಯಡಿಯೂರಪ್ಪನವರ ಕನಸು ಈಡೇರುವುದಿಲ್ಲ. ಲೋಕಸಭೆ ಚುನಾವಣೆ ಬಳಿಕವೂ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಕ್ಕಳ ಜೊತೆ ಸಿದ್ದು:

ಹೆಲಿಪ್ಯಾಡ್‌ನಿಂದ ಬಾದಾಮಿ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಮಕ್ಕಳ ಜೊತೆ ಸಿದ್ದರಾಮಯ್ಯ ಕೆಲ ಕಾಲ ಕಳೆದರು. ಕಾರು ನಿಲ್ಲಿಸಿ ಮಕ್ಕಳಿಗೆ ಹಸ್ತಲಾಘವ ನೀಡಿದ ಸಿದ್ದರಾಮಯ್ಯ ಹೆಣ್ಣು ಮಕ್ಕಳ ತಲೆ ಸವರಿ ಆಶೀರ್ವದಿಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!