ಮತದಾರರಿಗೆ ಬುಲೆಟ್, ವಿದೇಶ ಪ್ರವಾಸ ಸೇರಿ ಹಲವು ಗಿಫ್ಟ್‌ಗಳು!

By Web DeskFirst Published Apr 1, 2019, 11:05 AM IST
Highlights

ಲೋಕಸಭಾ ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ ಬುಲೆಟ್, ವಿದೇಶ ಪ್ರವಾಸ ಸೇರಿದಂತೆ ಹತ್ತು ಹಲವು ಗಿಫ್ಟ್ಸ್| ತಮಿಳುನಾಡಿನ ಜನರಿಗೆ ಒಂದು ರೀತಿ ಸುಗ್ಗಿಕಾಲ

ಹೈದರಾಬಾದ್[ಏ.01]: ಯಾವುದೇ ಚುನಾವಣೆ ನಡೆದರೂ ತಮಿಳುನಾಡಿನ ಜನರಿಗೆ ಒಂದು ರೀತಿ ಸುಗ್ಗಿಕಾಲವೆಂದೇ ಅರ್ಥ. ಯಾಕೆಂದರೆ, ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಮಿಕ್ಸಿ, ಟೀವಿ, ಸೀರೆ, ಕುಕ್ಕರ್ ಸೇರಿ ಇತರ ವಸ್ತು ಗಳನ್ನು ಮತದಾರರಿಗೆ ಹಂಚುತ್ತವೆ. ಆದರೆ, ಈ ಬಾರಿ ಒಂದು ಕೈ ಮುಂದೆ ಹೋದ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಮತ ಚಲಾಯಿಸುವ ಮತದಾರರಿಗೆ ಚಿನ್ನದ ಸರಗಳು ಮತ್ತು ಉಂಗುರಗಳು, ರೆಫ್ರಿಜರೇಟರ್, ಬುಲೆಟ್ ಬೈಕ್, ಹಾಗೂ ವಿದೇಶ ಪ್ರವಾಸದ ವೆಚ್ಚವನು ವಹಿಸಿಕೊಳ್ಳಲು ಮುಂದಾಗಿದ್ದಾರೆ ಎಂಬುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಯಲು ಮಾಡಿದ್ದಾರೆ.

ಅಕ್ರಮ ಹಣ ಗಳಿಕೆ ಆರೋಪದ ಮೇಲೆ ಶನಿವಾರವಷ್ಟೇ ಐಟಿ ಅಧಿಕಾರಿಗಳು ಡಿಎಂಕೆಯ ಖಜಾಂಚಿ ಎಸ್. ದೊರೈಮುರುಗನ್ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಹೆಚ್ಚು ಮತ ನೀಡುವ ವಿಧಾ ನಸಭೆಯ ಕಾರ‌್ಯಕರ್ತರಿಗೆ ೫೦ ಲಕ್ಷ ರು. ನೀಡುವುದಾಗಿ ವಾಗ್ದಾನ ಮಾಡಿದ್ದೆ ಎಂದಿದ್ದಾರೆ ಮುರುಗನ್.

ಅಲ್ಲದೆ, ವೆಲ್ಲೂರು ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಎ.ಸಿ ಷಣ್ಮು ಗಂ ಸೇರಿದಂತೆ ಇತರ ಪಕ್ಷದ ಅಭ್ಯರ್ಥಿಗಳು, ಕಾರ‌್ಯ ಕರ್ತರಿಗೆ ಬುಲೆಟ್ ಬೈಕ್, ವಿದೇಶಿ ಪ್ರವಾಸಗಳ ಖರ್ಚು, ಹೆಚ್ಚು ಲೀಡ್ ಕೊಡುವ ವಿಧಾನ ಸಭೆ ಕ್ಷೇತ್ರದ ಉಸ್ತುವಾರಿಗೆ ೧ ಕೋಟಿ ನೀಡುವುದಾಗಿ ಹೇಳಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!