
ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ಮುನ್ನವೇ ರಾಜ್ಯದ ಮೈತ್ರಿ ಪಕ್ಷಗಳಲ್ಲಿ ಆಂತರಿಕ ಕಿತ್ತಾಟ ಜೋರಾಗಿದೆ. ಚುನಾವಣೆ ಬಳಿಕ ಮೈತ್ರಿ ಸರ್ಕಾರ ನಿರ್ನಾಮವಾಗಲಿದ್ದು, ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ. ಎಸ್.ಈಶ್ವರಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಶೀಘ್ರದಲ್ಲೇ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಲಿದೆ.
ಈಗಾಗಲೇ ಜೆಡಿಎಸ್-ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಮಧ್ಯೆ ಪರಸ್ಪರ ಅಪನಂಬಿಕೆಯಿದೆ. ತುಮಕೂರಲ್ಲಿ ಕಾಂಗ್ರೆಸ್‌ನವರು ಸೋಲಿಸುತ್ತಾರೆ ಎಂದು ದೇವೇಗೌಡರಿಗೆ ಭಯ ಶುರುವಾಗಿದೆ. ಇತ್ತ ಮೈಸೂರಲ್ಲಿ ವಿಜಯಶಂಕರ್ ಅವರನ್ನು ಜೆಡಿಎಸ್ ಸೋಲಿಸಲಿದೆ ಎಂದು ಸಿದ್ದರಾಮಯ್ಯ ಭಯಪಡುತ್ತಿದ್ದಾರೆ ಎಂದು ಹೇಳಿದರು.