ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶೈಕ್ಷಣಿಕ ಅರ್ಹತೆ ಬಗ್ಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕಾಲೆಳೆದಿದ್ದಾರೆ.
ನವದೆಹಲಿ :ಲೋಕಸಭೆ ಚುನಾವಣಾ ಕಾವು ದೇಶದಲ್ಲಿ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿ ತಮ್ಮ ಶಿಕ್ಷಣ, ಆಸ್ತಿ ಪಾಸ್ತಿ ವಿವರಗಳನ್ನು ಬಹಿರಂಗಪಡಿಸುತ್ತಿದ್ದಾರೆ.
ಚುನಾವಣೆಯ ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಇದೇ ವಿಚಾರವಾಗಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕಾಲೆಳೆದಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಹಾಗೂ ವಯನಾಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಈ ವೇಳೆ ಶೈಕ್ಷಣಿಕ ಅರ್ಹತೆ ಹಾಗೂ ಆಸ್ತಿ ವಿವರಗಳ ಮಾಹಿತಿ ಬಹಿರಂಗ ಮಾಡಲಾಗಿದೆ. ಇದೀಗ ಶಿಕ್ಷಣದ ಬಗ್ಗೆ ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.
Buddhu’s Cambridge Certificate says his name is Raul Vinci and he read MPhil and failed in National Economic Planning & Policy pic.twitter.com/22kBHSRbcR
— Subramanian Swamy (@Swamy39)ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಪದವಿ ಪಡೆದ ಅಂಕಪಟ್ಟಿಯನ್ನು ಶೇರ್ ಮಾಡಿ ಬುದ್ದು ಎಂ ಫಿಲ್ ಪಡೆದರು ನ್ಯಾಷನಲ್ ಎಕಾನಾಮಿಕ್ ಪ್ಲಾನಿಂಗ್ ಅಂಡ್ ಪಾಲಿಸಿಯಲ್ಲಿ ಮಾತ್ರ ಅನುತ್ತೀರ್ಣ ಎಂದು ಬರೆದುಕೊಂಡಿದ್ದಾರೆ.