ಜನಮೆಚ್ಚಿದ ಗಾಯಕ ಹನುಮಂತಪ್ಪನಿಗೆ ಹೊಸ ಜವಾಬ್ದಾರಿ

By Web Desk  |  First Published Mar 30, 2019, 9:22 PM IST

ಸರಿಗಮಪದ ಹನುಂತನಿಗೆ ಹೊಸದೊಂದು ಜವಾಬ್ದಾರಿ ಸಿಕ್ಕಿದೆ.  ಕರ್ನಾಟಕವೇ ಮೆಚ್ಚಿದ ಗಾಯಕ ಮತದಾನ ಮಾಡಿ ಎಂದು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.


ಹಾವೇರಿ[ಮಾ. 30]  ಸರಿಗಮಪ 15 ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ, ಅಚ್ಚು ಮೆಚ್ಚಿನ ಗಾಯಕ ಹನುಮಂತಪ್ಪ, ತನ್ನದೇ ಶೈಲಿಯ ಹಾಡುಗಳಿಂದ ಕರುನಾಡಿನ ಜನರನ್ನ ಮೋಡಿ ಮಾಡಿದ್ದ. ಜಾನಪದ ಹಾಡುಗಳ ಎಲ್ಲರ ಮನೆ ಮಾತಾಗಿದ್ದ ಈ ಹಳ್ಳಿ ಹೈದನಿಗೆ ಇದೀಗ ಮತದಾನ ಜಾಗೃತಿ ಮೂಡಿಸುವ ಮಹತ್ವದ ಜವಾಬ್ದಾರಿ ಸಿಕ್ಕಿದೆ.

ಕಳ್ಳತನವಾಯ್ತು ಸಿಂಗರ್ ಹನುಮಂತಪ್ಪನ ಮೊಬೈಲ್ - ಹಾಡಿನ ಮೂಲಕ ಮನವಿ!

Tap to resize

Latest Videos

undefined

ಹನುಮಂತಪ್ಪನ ಹಾಡು ಹೇಳುವ ಪರಿಗೆ ಚುನಾವಣಾ ಆಯೋಗವೇ ಫಿದಾ ಆಗಿದೆ. ಹೀಗಾಗಿ ಹಾವೇರಿಯಲ್ಲಿ ಚುನಾವಣಾ ಆಯೋಗ ಕುರಿಗಾಯಿ ಹನುಮಂತನನ್ನ ಪ್ರಚಾರದ ರಾಯಭಾರಿಯನ್ನಾಗಿ ಮಾಡಿದೆ. 

ಜಾನಪದ ಹಾಡುಗಳಿಂದ ಸಂಗೀತ ಲೋಕವೆ ಅಚ್ಚರಿ ಪಡುವಂತೆ ಮಾಡಿದ್ದ ಗಾಯಕ ನಾದಬ್ರಹ್ಮ ಹಂಸಲೇಖ ಅವರ ಮೆಚ್ಚುಗೆ ಪಡೆದುಕೊಂಡಿದ್ದರು.

click me!