ಮಂಡ್ಯ ಡಿಸಿ ಮಂಜುಶ್ರೀ ನೋಟಿಸ್ ಗೆ ಸುಮಲತಾ ಅಂಬರೀಶ್ ಖಡಕ್ ಉತ್ತರ

Published : Mar 30, 2019, 08:15 PM IST
ಮಂಡ್ಯ ಡಿಸಿ ಮಂಜುಶ್ರೀ ನೋಟಿಸ್ ಗೆ ಸುಮಲತಾ ಅಂಬರೀಶ್ ಖಡಕ್ ಉತ್ತರ

ಸಾರಾಂಶ

ಮಂಡ್ಯ ಡಿಸಿ ನೀಡಿದ್ದ ನೋಟಿಸ್ ಗೆ ಸುಮಲತಾ ಖಡಕ್ ಉತ್ತರ | ಡಿಸಿ ಮಂಜುಶ್ರೀ ವಿರುದ್ಧ ಮತ್ತೆ ತಿರುಗಿಬಿದ್ದ ಸುಮಲತಾ ಅಂಬರೀಶ್ | ಉತ್ತರ ಕೋಡುವ ಮೂಲಕ ತಮ್ಮ ಹೇಳಿಕೆಯನ್ನ ಸರ್ಮರ್ಥಿಸಿಕೊಂಡ ಸುಮಲತಾ ಅಂಬರೀಶ್. 

ಮಂಡ್ಯ, [ಮಾ.30]:  ಜಿಲ್ಲಾಡಳಿತದ ಬಗ್ಗೆ ಅಪನಂಬಿಕೆ ಬರುವಂತೆ ಹೇಳಿಕೆ ಆರೋಪದ ಮೇಲೆ ಜಿಲ್ಲಾಧಿಕಾರಿ ಮಂಜುಶ್ರೀ ನೀಡಿದ್ದ ನೋಟಿಸ್ ಗೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಖಡಕ್ ಉತ್ತರ ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಗೊಂದಲ ಸೇರಿದಂತೆ ಜಿಲ್ಲಾಡಳಿತ ಕಾರ್ಯವೈಖರಿ ಬಗ್ಗೆ ಅನುಮಾನ ಸುಮಲತಾ ಅಂಬರೀಶ್ ವ್ಯಕ್ತಪಡಿಸಿದ್ದರು. ಇದಕ್ಕೆ ಸರ್ಕಾರಿ ಸಂಸ್ಥೆಯನ್ನು ಅನುಮಾನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನೋಟಿಸ್ ನೀಡಿದ್ದರು.

ಸುಮಲತಾಗೆ ಡಿಸಿ ನೊಟೀಸ್; ಒಂದು ದಿನದೊಳಗೆ ಉತ್ತರಿಸಲು ಸೂಚನೆ

ಮಂಡ್ಯ ಡಿಸಿ ನೀಡಿದ್ದ ನೋಟಿಸ್ ಗೆ ಉತ್ತರ ಕೋಡುವ ಮೂಲಕ ತಮ್ಮ ಹೇಳಿಕೆಯನ್ನ ಸರ್ಮರ್ಥಿಸಿಕೊಂಡಿರುವ ಸುಮಲತಾ ಅಂಬರೀಶ್, ನೀವು ಕರ್ತವ್ಯ ಲೋಪ ಮಾಡಿರುವುದು ಸತ್ಯ. ದುರುದ್ದೇಶದಿಂದ ನನಗೆ ನೋಟಿಸ್ ನೀಡಿದ್ದು, ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸತ್ಯವನಷ್ಟೇ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದೇನೆ.  ವಾಸ್ತವಿಕ ಸತ್ಯವನ್ನು ಮಾಧ್ಯಮದೊಂದಿಗೆ  ಹೇಳಿದ್ದೇನೆ. ನೀವು ನೋಟಿಸ್ ನೀಡಿರುವ ಆಗೇ ನಾನು ತಪ್ಪು ಮಾತನಾಡಿಲ್ಲ. ನನ್ನ ಮೇಲೆ ಕಾನುನೂ ಕ್ರಮ ಕೈಗೋಳ್ಳುವ  ತಪ್ಪು ಮಾಡಿಲ್ಲ. ನನ್ನ ವಿರುದ್ಧ ಕ್ರಮ ಜರುಗಿಸುವ ಅನಿವರ್ಯತೆ ಇಲ್ಲ. ನೀವು ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದೆ ಎಂದು ಮಂಡ್ಯ ಡಿಸಿ ಮಂಜುಶ್ರೀಗೆ ಸುಮಲತಾ ಅಂಬರೀಶ್ ಉತ್ತರ ಖಡಕ್ ಆಗಿಯೇ ಹೇಳಿದರು.

ಮಂಡ್ಯ ಡಿಸಿ ಮಂಜುಶ್ರೀ ನಡುವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಸಿಎಂ ಕುಮಾರಸ್ವಾಮಿ ಆಣತಿಯಂತೆ ಕೆಲಸ ಮಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!