ಸಿದ್ದು ಮಾತಿಗೂ ಬಗ್ಗದ ರೆಬಲ್, ಯಾರಿಗೆ ಒಲಿಯುತ್ತಾರೋ ‘ಚಲುವರಾಯಸ್ವಾಮಿ !’

Published : Apr 07, 2019, 04:27 PM ISTUpdated : Apr 07, 2019, 04:36 PM IST
ಸಿದ್ದು ಮಾತಿಗೂ ಬಗ್ಗದ ರೆಬಲ್, ಯಾರಿಗೆ ಒಲಿಯುತ್ತಾರೋ ‘ಚಲುವರಾಯಸ್ವಾಮಿ !’

ಸಾರಾಂಶ

ಮೈತ್ರಿ ಧರ್ಮ ಪಾಲಿಸದವರು ತಮ್ಮ ದಾರಿ ತಾವು ನೋಡಿಕೊಳ್ಳಬಹುದು ಎಂಬ ಹೇಳಿಕ ನಂತರ ಮಂಡ್ಯ ರಾಜಕಾರಣದ ಚಿತ್ರಣ ಮತ್ತೊಂದು ಹಂತಕ್ಕೆ ಬದಲಾಗಿದೆ.

ಬೆಂಗಳೂರು[ಏ. 07]  ಮಂಡ್ಯದ ರೆಬಲ್ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ರೆಬಲ್ ಮುಖಂಡರು ಮಾತುಕತೆಗೆ ಬಗ್ಗಿಲ್ಲ.

ಮಂಡ್ಯ ಚುನಾವಣೆಯಲ್ಲಿ ನಮ್ಮದೇನು ಪಾತ್ರ ಇರಲ್ಲ. ನಮ್ಮ ಪಾಡಿಗೆ ನಾವಿದ್ದೇವೆ. ಇಂದಿನ ಸಭೆಯಲ್ಲಿ‌ ಪಕ್ಷದ ಅಧ್ಯಕ್ಷರು ಮತ್ತು  ಸಿದ್ದರಾಮಯ್ಯ ಕೆಲ ಸಲಹೆ ನೀಡಿದ್ದಾರೆ. ನಾವು ಕಾರ್ಯಕರ್ತರೊಂದಿಗೆ ಚರ್ಚಿಸಿ ಅವರು ಏನು ತಿಳಿಸಬೇಕೋ ತಿಳಿಸ್ತೇವೆ. ಪಕ್ಷ ನಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಂಡ್ರೆ ಅದನ್ನ ಆಶೀರ್ವಾದ ಅಂದುಕೊಳ್ತೇವೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಹಣದ ಮಾತು: JDS ಮಿನಿಸ್ಟರ್-ಮಾಜಿ ಸಂಸದ ಆಡಿಯೋ ವೈರಲ್..!

ಸಿಎಂ ಕುಮಾರಸ್ವಾಮಿ ಅವರೆ ಕರೆದು ಮಾತನಾಡಲಿ ಎಂಬ ಬೇಡಿಕೆಯನ್ನು ನಾಯಕರು ಇಟ್ಟಿದ್ದಾರೆ ಎನ್ನಲಾಗಿದೆ. ನಮ್ಮ ಅಗತ್ಯ ಇದೆಯೋ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.


 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!