ಹಲೋ ಎಂದ ಸಿದ್ದು-ಜಿಟಿಡಿ,  ಮುನಿಸು ಮರೆವಿಗೆ ಮುಲಾಮು ಹಚ್ಚಿದ್ಯಾರು?

By Web DeskFirst Published Apr 6, 2019, 6:04 PM IST
Highlights

ಮೈಸೂರಿನ ರಾಜಕಾರಣ ದಿಕ್ಕನ್ನು ಬದಲಾಯಿಸುವ ವಾತಾವರಣ ನಿರ್ಮಾಣವಾಗಿದೆಯೇ? ಸದ್ಯದ ರಾಜಕಾರಣದ ಬೆಳವಣಿಗೆ ಹೊಸದೊಂದಿಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಮೈಸೂರು[ಮಾ. 06]  ಮೈಸೂರಿನಲ್ಲಿ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಸಚಿವ ಜಿಟಿ ದೇವೇಗೌಡ,  ಮೊನ್ನೆ ಬಾಲಕೃಷ್ಣ ನಿವಾಸದಲ್ಲಿ ಇಬ್ಬರು ಮಾತನಾಡುವ ಸಮಯ ಬಂದಿತ್ತು. ಜಮೀರ್ ಮಾತನಾಡುವಂತೆ ಕೇಳುತ್ತಿದ್ದರು.  ಆಗ ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ಹಲೋ ಎನ್ನುವ ಮೂಲಕ ಮಾತು ಆರಂಭಿಸಿದೆವು ಎಂದು ಪ್ರಕರಣ ತೆರೆದಿಟ್ಟರು,..

ನಾವು ರಾಜಕೀಯವಾಗಿ ವೈರಿಗಳ ಹೊರತು ವೈಯಕ್ತಿಕವಾಗಿ ಅಲ್ಲ.  1983 ರಿಂದ 2006ರವರೆಗೆ ನಮ್ಮಂತಹ ಪ್ರೀತಿಪಾತ್ರರು ಮತ್ತೊಬ್ಬರು ಇರಲು ಸಾಧ್ಯವಿಲ್ಲ.  2006ರ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರ ಪಕ್ಷಗಳು ಬೇರೆ ಬೇರೆ ಆದೆವು ಎಂದು ರಾಜಕಾರಣದ ಇತಿಹಾಸ ಹೇಳುತ್ತಾ ಹೋದರು.

ಮೈತ್ರಿ ಪಾಲಿಸದವರಿಗೆ ಸಿದ್ದರಾಮಯ್ಯ ಕೊಟ್ಟ ಎಚ್ಚರಿಕೆ

ನಾನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ ನಂತರ ರಾಜಕೀಯವಾಗಿ ವೈರತ್ವ ಉಂಟಾಯಿತು. ನಮ್ಮ ನಮ್ಮ ಕಾರ್ಯಕರ್ತರಿಗೆ ಸಲುವಾಗಿ ನಾವು ಆ ರೀತಿ ನಡೆದುಕೊಳ್ಳಬೇಕಾಯಿತು.  ಇದರ ಹೊರತಾಗಿ ವೈಯಕ್ತಿಕವಾಗಿ ಯಾವುದೇ ದ್ವೇಷ ಇಲ್ಲ ಎಂದರು.

ಈಗ ಇಬ್ಬರು ಮಾತನಾಡಿದ ನಂತರ ಅಂತರ ಮತ್ತಷ್ಟು ಕಡಿಮೆಯಾಗುತ್ತದೆ. ಇದು ಕ್ಷೇತ್ರದ ಕಾರ್ಯಕರ್ತರ ವಿಚಾರದಲ್ಲಿ ಉತ್ತಮ ಬೆಳವಣಿಗೆ. ಮುಂದೆ ಕಾರ್ಯಕರ್ತರ ನಡುವೆ ಕೂಡ ಗಲಾಟೆಗಳು ಕಡಿಮೆಯಾಗುತ್ತವೆ ಎಂಬ ವಿಶ್ವಾಸ ನನಗಿದೆ ಎಂದರು.

ಇಂದು ಬೆಳಗ್ಗೆ ಕೂಡ ಸಿದ್ದರಾಮಯ್ಯ ಫೋನ್ ಮಾಡಿ ಮಾತನಾಡಿದರು. ಜೆಡಿಎಸ್ ಸಭೆ ಯಲ್ಲಿ ನಡೆದ ಗದ್ದಲ ಬಗ್ಗೆ ವಿಚಾರಿಸಿದರು. ಸಭೆಯಲ್ಲಿ ಯಾರೋ ಮೋದಿ ಎಂದು ಘೋಷಣೆ ಕೂಗಿದ್ದಕ್ಕೆ ಗಲಾಟೆ ಆಯ್ತು ಎಂದು ನಾನು ಹೇಳಿದೆ. ನಾಳೆ ಕೂಡ ಸ್ಥಳೀಯ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಮೊನ್ನೆ ಸಭೆಯಲ್ಲಿ ಕಳೆದ  ಲೋಕಸಭಾ ಚುನಾವಣೆಯಲ್ಲಿ ವಿಶ್ವನಾಥ್ ಸೋಲಿನ ಬಗ್ಗೆ ಕೂಡ ಅವರು ಮಾತನಾಡಿದರು. ಈ ಬಾರಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ನವರ ಸಹಕಾರ ಬೇಕು ಎಂಬುದನ್ನ ಸಿದ್ದರಾಮಯ್ಯ ಪ್ರತಿಪಾದಿಸಿದರು. ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆ ಆದ ನಂತರ ತಮ್ಮನ್ನು ಸರಿಯಾಗಿ ನಡೆದುಕೊಳ್ಳದ ರ ಬಗ್ಗೆ ಕೂಡ ನಾನು ಮಾತನಾಡಿದೆ ಎಂದು ಹೇಳಿದರು.

 

click me!