ಪೇಜಾವರ ಸ್ವಾಮೀಜಿ ಆಶೀರ್ವಾದ ಪಡೆದ ಬಿಕೆ ಹರಿಪ್ರಸಾದ್

Published : Apr 06, 2019, 04:53 PM ISTUpdated : Apr 06, 2019, 05:55 PM IST
ಪೇಜಾವರ ಸ್ವಾಮೀಜಿ ಆಶೀರ್ವಾದ ಪಡೆದ ಬಿಕೆ ಹರಿಪ್ರಸಾದ್

ಸಾರಾಂಶ

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಪೇಜಾವರ  ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಉಡುಪಿ(ಏ.06)  ಯುಗಾದಿ ಹಬ್ಬದ ದಿನ ಪೇಜಾವರ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಲೋಕಾಕಲ್ಯಾಣಕ್ಕೆ ಅವರು ಪ್ರಾರ್ಥನೆ ಮಾಡುತ್ತಾರೆ. ನಾನು ಯಾವುದೇ ರಾಜಕೀಯ ವಿಚಾರವಾಗಿ ಭೇಟಿಯಾಗಿಲ್ಲ. ಸ್ವಾಮೀಜಿಗಳು ಕೂಡ ರಾಜಕೀಯವಾಗಿ ಮಾತನಾಡುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಹೇಳಿದರು.

ಇನ್ನು ನನ್ನ ಪರವಾಗಿ ದೇವೇಗೌಡರು, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್,  ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ. ಕ್ಷೇತ್ರದಲ್ಲಿ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ. ಬೆಂಗಳೂರು ದಕ್ಷಿಣದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.  

ಮಂಡ್ಯದ ಸಂತೆಯಲ್ಲಿ ಸಿಗುತ್ತೆ ರೇವಣ್ಣ ಹೆಸರಿನ ನಿಂಬೆಹಣ್ಣು!

ಮಂಡ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್  ಕಾರ್ಯಕರ್ತರು ಹೊಂದಾಣಿಕೆಯಾಗದ ವಿಚಾರದ ಬಗ್ಗೆಯೂ ಪತ್ರಕರ್ತರು ಪ್ರಶ್ನೆ ಕೇಳಿದರು  ಅದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್,  ಕೆಲವರು ವ್ಯಕ್ತಿಗತ ರಾಜಕಾರಣ ಮಾಡುತ್ತಿದ್ದಾರೆ  ಪಕ್ಷ ಜಾತ್ಯಾತೀತ ಜನತಾದಳದ ನಿಖಿಲ್ ಜೊತೆಗಿದೆ ಎಂದು ಹೇಳಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!