
ತುಮಕೂರು (ಮಾ. 30): ನಾನೂ ಚೌಕಿದಾರ್ ಅಭಿಯಾನಕ್ಕೆ ಶೃತಿ ಚಾಲನೆ ಕೊಟ್ಟು ಪ್ರತಿಯೊಬ್ಬರೂ ಕಾವಲುದಾರರು. ಮೋದಿಯವರು ನಿಜವಾದ ಚೌಕಿದಾರ. ದೇಶವನ್ನ ಚೌಕಿದಾರ ಕಾಯುತ್ತಿರುವಾಗ ದೇಶದ ಜನರು ಕೂಡಾ ಚೌಕಿದಾರ್ ಅನ್ನುತ್ತಿದ್ದಾರೆ. ನಾನು ಭಾರತೀಯಳು ಅನ್ನುವ ಹೆಮ್ಮೆ ಹಾಗೆ ನಾನು ಬಿಜೆಪಿ ಕಾರ್ಯಕರ್ತೆ ಅನ್ನೋದಕ್ಕೂ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಆ ಹೆಮ್ಮೆ ಮೋದಿಯವರಿಂದ ಬಂದದ್ದು. ಇಡೀ ವಿಶ್ವದಲ್ಲೇ ಅವರಿಗೆ ಗೌರವ ಸಿಗುತ್ತಿದೆ. ಮಹಿಳಾ ಪರವಾದ ಹಲವು ಕಾರ್ಯಕ್ರಮಗಳನ್ನು ಮೋದಿ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಗೆ ದೇಶದ ರಕ್ಷಣಾ ಖಾತೆ ಕೊಟ್ಟು ಮಹಿಳೆಯರ ಪ್ರಾಮುಖ್ಯತೆ ಹೆಚ್ಚಿಸಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ಬಂದಿರುವ ಅತಂತ್ರ ಸ್ಥಿತಿ ಕೇಂದ್ರದಲ್ಲಿ ಬರಬಾರದು. ಅತಂತ್ರವಾದ್ರೆ ದೋಸ್ತಿಗಳಿಂದ ಕುರ್ಚಿ ಗಾಗಿ ಕಾದಾಟ ನಡೆಯುವುದನ್ನು ನೋಡುತಿದ್ದೇವೆ. ಕಾಂಗ್ರೆಸ್ ನವರ ಬಳಿ ಕಪ್ಪು ಹಣ ಇರಬಹುದು. ಅದನ್ನೇ ಈಗ ತಿಂಗಳಿಗೆ ವರ್ಷಕ್ಕೆ 72 ಸಾವಿರ ಪ್ರಣಾಳಿಕೆ ಮಾಡಿದ್ದಾರೆ. ಅದೊಂದು ಸುಳ್ಳಿನ ಕಂತೆ ಎಂದಿದ್ದಾರೆ.
"