ಗೋಡ್ಸೆ ಪರ ಹೇಳಿಕೆ: ಸಾಧ್ವಿ ವಜಾಗೊಳಿಸಲು ನಿತೀಶ್ ಆಗ್ರಹ!

Published : May 19, 2019, 01:41 PM IST
ಗೋಡ್ಸೆ ಪರ ಹೇಳಿಕೆ: ಸಾಧ್ವಿ ವಜಾಗೊಳಿಸಲು ನಿತೀಶ್ ಆಗ್ರಹ!

ಸಾರಾಂಶ

ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪರ ಹೇಳಿಕೆ| ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಜಾಗೊಳಿಸಲು ನಿತೀಶ್ ಕುಮಾರ್ ಆಗ್ರಹ| ‘ಸಾಧ್ವಿ ವಿರುದ್ಧ ಕ್ರಮ ಕೈಗೊಳ್ಳುವುದು ಬಿಜೆಪಿ ಆಂತರಿಕ ವಿಚಾರ’| ಕಠಿಣ ಕ್ರಮದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ ಬಿಹಾರ ಸಿಎಂ| ಪುತ್ರನೊಂದಿಗೆ ಮತದಾನ ಮಾಡಿದ ನಿತೀಶ್ ಕುಮಾರ್|

ಪಾಟ್ನಾ(ಮೇ.19): ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪರ ಹೇಳಿಕೆ ನೀಡಿದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ.

ಗೋಡ್ಸೆ ಪರ ಸಾಧ್ವಿ ಹೇಳಿಕೆ ಅಸಹನೀಯ ಎಂದಿರುವ ನಿತೀಶ್, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದುದು ಬಿಜೆಪಿಯ ಆಂತರಿಕೆ ವಿಚಾರವಾದರೂ ತಾವು ಕಠಿಣ ಕ್ರಮದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.

ಮಹಾತ್ಮಾ ಗಾಂಧಿ ವಿರುದ್ಧ ಯಾರೇ ಹೇಳಿಕೆ ನೀಡಿದರೂ ಅದನ್ನು ಸಹಿಸಲು ಸಾಧ್ಯವಿಲ್ಲ. ಸಾಧ್ವಿ ವಿರುದ್ಧ ಬಿಜೆಪಿ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ತಾವು ಕಾದು ನೋಡುವುದಾಗಿ ನಿತೀಶ್ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು ನಿತೀಶ್ ಕುಮಾರ್ ತಮ್ಮ ಪುತ್ರ ನಿಶಾಂತ್ ಜೊತೆ ಪಾಟ್ನಾ ಸಾಹೇಬ್ ಲೋಕಸಭಾ ಕ್ಷೇತ್ರದ ದಿಘಾ ಅಸೆಂಬ್ಲಿ ವ್ಯಾಪ್ತಿಯ ರಾಜ್ ಭವನ್ ವಸತಿ ಪ್ರದೇಶದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!