ಮಂಡ್ಯದಲ್ಲಿ ಸುಮಲತಾಗೆ ಜೆಡಿಎಸ್ ನಾಯಕರ ಬೆಂಬಲ ?

Published : May 19, 2019, 12:41 PM IST
ಮಂಡ್ಯದಲ್ಲಿ ಸುಮಲತಾಗೆ ಜೆಡಿಎಸ್ ನಾಯಕರ ಬೆಂಬಲ ?

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾಗೆ ಜೆಡಿಎಸ್ ಕೆಲ ನಾಯಕರು ಬೆಂಬಲ ನೀಡಿದ್ದಾರೆ ಎಂದು ಕೈ ಮುಖಂಡರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ. 

ಮಂಡ್ಯ : ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸುಮಲತಾ ಅಂಬರೀಶ್  ಪರ ಜೆಡಿಎಸ್ ನಾಯಕರು ಕೆಲಸ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಇದೀಗ ಇನ್ನೋರ್ವ ಕೈ ನಾಯಕರ ಹೇಳಿಕೆ ಪುಷ್ಟಿ ನೀಡಿದೆ. 

ಮಳ್ಳವಳ್ಳಿಯಲ್ಲಿ ಮಾತನಾಡಿದ ಮಾಜಿ ಶಾಸಕ ನರೇಂದ್ರ ಸ್ವಾಮಿ ಈ ಬಗ್ಗೆ ಮಾತನಾಡಿದ್ದು, JDS ನ ಕೆಲವರು ಬೆಂಬಲ ನೀಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಇದ್ದು, ಕುಮಾರಸ್ವಾಮಿ, ದೇವೇಗೌಡರಿಗೆ ಯಾರು ಎಲ್ಲಿ ಮೋಸ ಮಾಡಿದ್ದಾರೆ ಎನ್ನುವುದು ಮುಂದೆ ಚರ್ಚೆಗೆ ಬರಲಿದೆ ಎಂದು ಹೇಳಿದರು. 

ಮಂಡ್ಯ ರಾಜಕೀಯದಲ್ಲಿ ಏನೇನು ನಡೆದಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ತಾವು ಮಾತ್ರ ಯಾರ ಪರವೂ ಕೆಲಸ ಮಾಡದೇ ತಟಸ್ಥವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಸ್ಪಷ್ಟಪಡಿಸಿದ್ದೆ ಎಂದು ನರೇಂದ್ರ ಸ್ವಾಮಿ ಹೇಳಿದರು. 

ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಪರ ಕೆಲಸ ಮಾಡಿಲ್ಲದಿದ್ದರೆ ಮಹದೇಶ್ವರ ಸನ್ನಿಧಿಯಲ್ಲಿ ಆಣೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅದಕ್ಕೆ ಯೋಗ್ಯರಾಗಿರುವವರು ಮಾತನಾಡಿದಾಗ ಮಾತ್ರ ಉತ್ತರ ನೀಡುತ್ತೇ. ಎಲ್ಲರಿಗೂ ಉತ್ತರಿಸುವ ಅನಿವಾರ್ಯತೆ ಇಲ್ಲ ಎಂದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!