ಮೋದಿ ಸೇರಿ 918 ಅಭ್ಯರ್ಥಿಗಳು: ಕೊನೆಯ ಹಂತದ ತಳಮಳಗಳು!

By Web DeskFirst Published May 19, 2019, 12:46 PM IST
Highlights

ಲೋಕಸಭಾ ಚುನಾವಣೆಗೆ ಏಳನೇ ಹಂತದ ಮತದಾನ| ಆರಂಭವಾಗಿದ್ದು, ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ| ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ| ಪ್ರಧಾನಿ ಮೋದಿ ಸೇರಿದಂತೆ ಕಣದಲ್ಲಿದ್ದಾರೆ 918 ಅಭ್ಯರ್ಥಿಗಳು| ಪ.ಬಂಗಾಳದಲ್ಲಿ ಮತಗಟ್ಟೆ ಸಮೀಪ ಬಾಂಬ್ ಸ್ಫೋಟ| 

ನವದೆಹಲಿ(ಮೇ.19): ಲೋಕಸಭಾ ಚುನಾವಣೆಗೆ ಏಳನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 918 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ವಾರಾಣಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್‌ನ ಅಜಯ್ ರಾಯ್ ಮತ್ತು ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿ ಶಾಲಿನಿ ಯಾದವ್ ಕಣದಲ್ಲಿದ್ದಾರೆ.

2014 ರಲ್ಲಿ ಈ 59 ಕ್ಷೇತ್ರಗಳ ಪೈಕಿ ಬಿಜೆಪಿ 30 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ ಈ ಹಂತ ಕೂಡ ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ.

ಇನ್ನು ಬೆಳಗಿನ ಒಂಬತ್ತು ಗಂಟೆ ಒಳಗೆ ದೇಶದ ನಾನಾ ಭಾಗಗಳಲ್ಲಿ ಬಿರುಸಿನಿಂದ ಮತದಾನ ನಡೆದಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ನವಜೋತ್ ಸಿಂಗ್ ಸಿಧು ಸೇರಿ ಅನೇಕರು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Voter turnout recorded till 9 am: Bihar-10.65%, Himachal Pradesh- 0.87%, Madhya Pradesh-7.16%, Punjab-4.64%, Uttar Pradesh-5.97%, West Bengal- 10.54, Jharkhand-13.19%, Chandigarh-10.40% in of pic.twitter.com/wG1XvkYS3m

— ANI (@ANI)

9 ಗಂಟೆಯವರೆಗೆ ದಾಖಲಾದ ಮತದಾನ ಪ್ರಮಾಣ:
ಬಿಹಾರ: ಶೇ.10.65 
ಹಿಮಾಚಲ ಪ್ರದೇಶ: ಶೇ.0.87
ಮಧ್ಯಪ್ರದೇಶ: ಶೇ.7.16 
ಪಂಜಾಬ್: ಶೇ.4.64 
ಉತ್ತರ ಪ್ರದೇಶ: ಶೇ.5.97
ಪಶ್ಚಿಮ ಬಂಗಾಳ:ಶೇ.10.54 
ಜಾರ್ಖಂಡ್: ಶೇ.13.19 
ಚಂಡೀಗಡ್: ಶೇ.10.40

ಇನ್ನು ಪಶ್ಚಿಮ ಬಂಗಾಳದಲ್ಲಿ ಮತಗಟ್ಟೆ ಸಮೀಪ ಬಾಂಬ್ ಸ್ಫೋಟ ಸಂಭವಿಸಿದ್ದು, ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿ ಏರ್ಪಟ್ಟಿದೆ. ಪ.ಬಂಗಾಳ ಹೊರತುಪಡಿಸಿದರೆ ಬಹುತೇಕ ಕಡೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!