ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ನಾಪತ್ತೆ ಹಿಂದಿನ ಸತ್ಯ ಬಹಿರಂಗ

By Web DeskFirst Published Apr 19, 2019, 8:53 PM IST
Highlights

ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ನಾಪತ್ತೆಯಾಗಲು ಏನು ಕಾರಣ ಎಂಬುದು ಪತ್ತೆಯಾಗಿದೆ.

ಶಿವಮೊಗ್ಗ[ಏ. 19]  ನಾಪತ್ತೆಯಾಗಿ ಸುದ್ದಿ ಮಾಡಿದ್ದ  ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಮೊಹಮ್ಮದ್ ಯೂಸುಫ್ ಖಾನ್  ಎಸ್‌ ಪಿ ಕಚೇರಿಗೆ ಹಾಜಾರಾಗಿದ್ದಾರೆ. ಶಿವಮೊಗ್ಗ ಎಸ್ಪಿ ಡಾ. ಅಶ್ವಿನಿ ಯವರಿಗೆ ನಾಪತ್ತೆ ಯಾದ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

ಎಪ್ರಿಲ್ 17 ರ ರಾತ್ರಿ 2 ಗಂಟೆಗೆ ನಾಪತ್ತೆ ಯಾಗಿದ್ದ ಯುಸೂಫ್ ಖಾನ್ ಹಾವೇರಿಯಲ್ಲಿ ಪತ್ತೆಯಾಗಿದ್ದರು. ಅಷ್ಟಕ್ಕೂ ಖಾನ್ ನಾಪತ್ತೆಯಾಗಲು ಕಾರಣವೇನು?

ನನ್ನ ಕ್ಷೇತ್ರದಲ್ಲಿ ಲೀಡ್ ಬರದಿದ್ರೆ ರಾಜೀನಾಮೆ, ರೊಚ್ಚಿಗೆದ್ದ ಕರ್ನಾಟಕದ ಸಚಿವ!

ವಾಟ್ಸ್ ಆಪ್ ನಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು  ಖಾನ್ ಮನೆ ಬಿಟ್ಟು ಹೋಗಿದ್ದರು. ನಂತರ ಹಾವೇರಿ, ರಾಣೆ ಬೆನ್ಬೂರು, ಲಕ್ಷೇಶ್ವರ, ಹರಿಹರ ಮೊದಲಾದ ಕಡೆಗಳಲ್ಲಿ ಮನಬಂದಂತೆ ಸುತ್ತಾಡಿ ಕೊನೆಗೆ ಮೊಮ್ಮಕ್ಕಳ ನೆನಪಾಗಿ ಮನೆಗೆ ಕರೆ ಮಾಡಿದ್ದರು.

ಯುಸೂಫ್ ಖಾನ್ ಬಗ್ಗೆ ಮಾಹಿತಿ ಪಡೆದ ಸ್ನೇಹಿತರು ಎಸ್ಪಿ ಕಚೇರಿಗೆ ಕರೆತಂದರು. ತನ್ನ ವಿರುದ್ಧ ಅವಹೇಳನಕಾರಿ ಮೆಸೇಜ್ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ಧ ಬ್ಲಾಕ್ ಮೇಲ್ ಪ್ರಕರಣವನ್ನು ಯೂಸೂಫ್ ದಾಖಲಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!