ನನ್ನ ಕ್ಷೇತ್ರದಲ್ಲಿ ಲೀಡ್ ಬರದಿದ್ರೆ ರಾಜೀನಾಮೆ, ರೊಚ್ಚಿಗೆದ್ದ ಕರ್ನಾಟಕದ ಸಚಿವ!

Published : Apr 19, 2019, 08:21 PM ISTUpdated : Apr 19, 2019, 08:26 PM IST
ನನ್ನ ಕ್ಷೇತ್ರದಲ್ಲಿ ಲೀಡ್ ಬರದಿದ್ರೆ  ರಾಜೀನಾಮೆ, ರೊಚ್ಚಿಗೆದ್ದ ಕರ್ನಾಟಕದ ಸಚಿವ!

ಸಾರಾಂಶ

ಈ ಸಚಿವರು ಸಖತ್ತಾದ ಸವಾಲೊಂದನ್ನು ಹಾಕಿದ್ದಾರೆ. ನನ್ನ ಕ್ಷೇತ್ರದಲ್ಲಿ ನನ್ನ ಪಕ್ಷದ ಅಭ್ಯರ್ಥಿಗೆ ಲೀಡ್ ಸಿಗದೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ಬೀದರ್[ಏ. 19]  ಈಶ್ವರ್ ಖಂಡ್ರೆಗೆ ನನ್ನ ಕ್ಷೇತ್ರದಿಂದ ಬಹುಮತ ಕೊಡದಿದ್ರೆ ರಾಜೀನಾಮೆ ನೀಡುವೆ ಎಂದು  ಬೀದರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ರಹೀಂ ಖಾನ್ ಹೇಳಿಕೆ ನೀಡಿದ್ದಾರೆ.

ಬೀದರ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಬೀದರ್ ಉತ್ತರ ಕ್ಷೇತ್ರದಿಂದ 20 ಸಾವಿರಕ್ಕೂ ಹೆಚ್ಚು ಲೀಡ್ ಬರಲಿದೆ. ಈಶ್ವರ್ ಖಂಡ್ರೆ ಅವರಿಗೆ ನನ್ನ ಕ್ಷೇತ್ರದಿಂದ ಲೀಡ್ ಬರದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದಿದ್ದಾರೆ.

ಫಲಿತಾಂಶಕ್ಕೂ ಮುನ್ನವೇ ನಿಖಿಲ್ ಕೆ. ಸಂಸದರು, ಮಂಡ್ಯ!

ಬೀದರ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಹೀಂ ಖಾನ್ ರೊಚ್ಚಿಗೆದ್ದು ಈ ಹೇಳಿಕೆ ನೀಡಿದ್ದು ಸಹಜವಾಗಿ ರಾಜಕಾರಣದ  ಬಿಸಿ ಹೆಚ್ಚಿಸಿದೆ. ಕಾಂಗ್ರೆಸ್‌ನಿಂದ ಈಶ್ವರ ಖಂಡ್ರೆ ಇದ್ದರೆ  ಬಿಜೆಪಿಯಿಂದ ಭಗವಂತ ಖೂಬಾ ಸೆಣೆಸಾಟ ನಡೆಸುತ್ತಿದ್ದಾರೆ.  ಪಕ್ಕದ ಕಲಬುರಗಿಯಲ್ಲಿ ಆದ ಪಕ್ಷಾಂತರ ಪರ್ವ ಈ ಕ್ಷೇತ್ರದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

"

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!