ನಟರು ಬಿಸಿಲಲ್ಲಿ ಸುತ್ತಾಡಲಿ ಎಂದ ಸಿಎಂಗೆ ಯಶ್ ತಿರುಗೇಟು!

Published : Apr 04, 2019, 07:50 AM ISTUpdated : Apr 04, 2019, 08:31 AM IST
ನಟರು ಬಿಸಿಲಲ್ಲಿ ಸುತ್ತಾಡಲಿ ಎಂದ ಸಿಎಂಗೆ ಯಶ್ ತಿರುಗೇಟು!

ಸಾರಾಂಶ

ಸುಮಲತಾ ಪರ ಪ್ರಚಾರಕ್ಕಿಳಿದಿರುವ ಸ್ಯಾಂಡಲ್ ವುಡ್ ನಟರಿಗೆ ಸಿಎಂ ಎಚ್ ಡಿ ಕುಮಾರಸ್ವಾಮಿ ಟಾಂಗ್| ಎಚ್ ಡಿಕೆಗೆ ತಿರುಗೇಟು ನೀಡಿದ ನಟ ಯಶ್

ಮಂಡ್ಯ[ಏ.04]: ನಾನು ಒಬ್ಬ ಸಾಮಾನ್ಯ ಡ್ರೈವರ್‌ ಮಗ, ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ್ದೇನೆ. ಚಿಕ್ಕಂದಿನಿಂದಲೇ ಬಿಸಿಲು ಮಳೆಯಲ್ಲಿ ಬೆಳೆದಿದ್ದೇನೆ. ನನಗೆ ಬಿಸಿಲಿನ ಭಯವಿಲ್ಲ ಏಕೆಂದರೆ ಬಿಸಿಲಿನಲ್ಲೇ ಗೋಲಿ, ಗಿಲ್ಲಿ ದಾಂಡು ಆಟ ಆಡಿದವರು ನಾವು ಎಂದು ಹೇಳಿಕೆ ನೀಡುವ ಮೂಲಕ ನಟ ಯಶ್‌ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಿಕ್ಕವಯಸ್ಸಿನಿಂದಲೇ ಬಡತನದಲ್ಲಿ ಬೆಳದವನು. ಬಿಸಿಲು, ಮಳೆಯಲ್ಲಿ ರಸ್ತೆ, ಗಲ್ಲಿಗಲ್ಲಿಗಳಲ್ಲಿ ಓಡಾಡಿಕೊಂಡು, ಗಿಲ್ಲಿದಾಂಡು, ಕ್ರಿಕೆಟ್‌ ಆಟವಾಡಿಕೊಂಡು, ಸರ್ಕಾರಿ ಬಸ್‌ಗಳಲ್ಲಿ ಓಡಾಟ ನಡೆಸಿರುವವನು. ಒಂದು ಹಂತದಲ್ಲಿ ಕಷ್ಟಪಟ್ಟು ಜನರ ಆಶೀರ್ವಾದದಿಂದ ಸದ್ಯ ಒಂದು ಎಸಿ ಕಾರಲ್ಲಿ ಓಡಾಟ ನಡೆಸುತ್ತಿದ್ದೇನೆ. ಹುಟ್ಟಿನಿಂದಲೇ ಎಸಿ ರೂಂ, ಎಸಿ ಕಾರಲ್ಲಿ ಬೆಳೆದು ಬಂದವರಿಗೆ ಬಿಸಿಲಿನ ತಾಪ ಏನು ಅನ್ನುವುದು ಗೊತ್ತಾಗುತ್ತದೆ. ಸಿಎಂ ಹೇಳಿರುವ ಮಾತುಗಳೆಲ್ಲಾ ಜೆಡಿಎಸ್‌ ಅಭ್ಯರ್ಥಿ ಕುರಿತು ಹೇಳಿರಬೇಕು. ಮಾಧ್ಯಮದವರು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದೀರಿ ಎಂದು ಹೇಳಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!