'ತುಮಕೂರಿಂದ ರಾಧಿಕಾ ಕುಮಾರಸ್ವಾಮಿ ನಿಲ್ತಾರೆ ಅನ್ಕೊಂಡಿದ್ದೆ'

Published : Apr 03, 2019, 09:37 PM IST
'ತುಮಕೂರಿಂದ ರಾಧಿಕಾ ಕುಮಾರಸ್ವಾಮಿ ನಿಲ್ತಾರೆ ಅನ್ಕೊಂಡಿದ್ದೆ'

ಸಾರಾಂಶ

ತುಮಕೂರಿಂದ ರಾಧಿಕಾ ಕುಮಾರಸ್ವಾಮಿ ನಿಲ್ತಾರೆ ಅನ್ಕೊಂಡಿದ್ದೆ ಎನ್ನುವ ಮೂಲಕ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ದೇವೇಗೌಡರ ಕುಟಂಬದ ವಿರುದ್ಧ ಮಾಧು ಸ್ವಾಮಿ ಹರಿಹಾಯ್ದಿದ್ದಾರೆ.  

ಬೆಂಗಳೂರು, (ಏ.03): ತುಮಕೂರಿನಿಂದ ರಾಧಿಕಾ ಕುಮಾರಸ್ವಾಮಿ ನಿಲ್ಲುತ್ತಾರೆ ಎಂದು ಭಾವಿಸಿದ್ದೆ. ಆದರೆ ದೇವೆಗೌಡರು ಬಂದುಬಿಟ್ಟರು ಎಂದು ಬಿಜೆಪಿ ಶಾಸಕ ಶಾಸಕ ಮಾಧು ಸ್ವಾಮಿ ದೊಡ್ಡಗೌಡ್ರ ಕಾಲೆಳೆದಿದ್ದಾರೆ.

 ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಧು ಸ್ವಾಮಿ, ಕರ್ನಾಟಕದಲ್ಲೀಗ ಕುಟುಂಬ ರಾಜಕಾರಣಕ್ಕೆ ಜೋರಾಗಿ ನಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇವೇಗೌಡರು ಕೂಡ ತಮ್ಮ ಇಡೀ ಕುಟುಂಬವನ್ನು ರಾಜಕಾರಣಕ್ಕೆ ತಂದಿದ್ದಾರೆ ವ್ಯಂಗ್ಯವಾಡಿದರು.

ಹಿಂದಿನಿಂದಲೂ ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಇಡೀ ರಾಜ್ಯವನ್ನೇ ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತಿದೆ. ಅತ್ತ ಮಂಡ್ಯದಲ್ಲಿ ನಿಖಿಲ್​​ ಕುಮಾರಸ್ವಾಮಿ, ಮತ್ತೊಂದು ಕಡೆ ಹಾಸನದಲ್ಲಿ ಪ್ರಜ್ವಲ್​​ ರೇವಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. 

ಇನ್ನು ರಾಮನಗರದಲ್ಲಿ ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಮುಖ್ಯಮಂತ್ರಿ, ಮತ್ತೊಬ್ಬರು ಎಚ್​​.ಡಿ ರೇವಣ್ಣ ಮೈತ್ರಿ ಸರ್ಕಾರದ ಮಂತ್ರಿ. ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ  ದೇವೇಗೌಡರು ಹಾಲಿ ಹಾಸನ ಸಂಸದರು ಎಂದು ಬಿಜೆಪಿ ಟೀಕಿಸುತ್ತಲ್ಲೇ ಬಂದಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!