ಕುಮಾರ್ ಬಂಗಾರಪ್ಪ ವಿರುದ್ಧ ಕೆರಳಿ ಕೆಂಡವಾದ ಶಿವಣ್ಣ ಅಭಿಮಾನಿಗಳು

Published : Apr 27, 2019, 10:45 PM IST
ಕುಮಾರ್ ಬಂಗಾರಪ್ಪ ವಿರುದ್ಧ ಕೆರಳಿ ಕೆಂಡವಾದ ಶಿವಣ್ಣ ಅಭಿಮಾನಿಗಳು

ಸಾರಾಂಶ

ಚುನಾವಣೆ ಸಮಯದ ಹೇಳಿಕೆಗಳು ತಿರುವು ಪಡೆದುಕೊಳ್ಳುವುದು ಸಹಜ. ಅಂಥದ್ದೇ ಒಂದು ಉದಾಹರಣೆ ಇಲ್ಲಿದೆ.

ಬೆಂಗಳೂರು [ಏ. 27]  ರಾಜಕೀಯ ವಿಚಾರವಾಗಿ ನಟ ಶಿವರಾಜ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಶಾಸಕ ಕುಮಾರ್ ಬಂಗಾರಪ್ಪ ಕ್ಷಮೆ ಯಾಚಿಸವಬೇಕು  ಎಂದು ಶಿವಣ್ಣ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಿರುವ ಅಭಿಮಾನಿಗಳು  ಶಿವರಾಜ್ ಕುಮಾರ್, ಪತ್ರಿಕಾಗೋಷ್ಠಿಯೊಂದರಲ್ಲಿ ಯಾರ ಪರವಾಗಿಯೂ ಮತ ಕೇಳಲ್ಲ. ಮಧು ಬಂಗಾರಪ್ಪ ಒಳ್ಳೆಯ ಮನುಷ್ಯ. ಅವನು ಸೂಕ್ತ ಎನಿಸಿದರೆ ಜನ ಆರಿಸಿ ಕಳುಹಿಸುತ್ತಾರೆ ಎಂದ ಹೇಳಿಕೆಯನ್ನು ಇಟ್ಟುಕೊಂಡು ಕುಮಾರ್ ಬಂಗಾರಪ್ಪ ತಮಗೆ ಬೇಕಾದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಮಾರ್ ಬಂಗಾರಪ್ಪ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಜಿದ್ದಾಜಿದ್ದಿ ಇದೀಗ ಅಭಿಮಾನಿಗಳನ್ನು ಕೆರಳಿಸಿದೆ.


 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!