‘ಕೈ’ ಬಿಟ್ಟು ಬಂದ ನಾಯಕಿಗೆ ‘ಸೇನೆ’ಯಲ್ಲಿ ಪ್ರಮುಖ ಸ್ಥಾನ

Published : Apr 27, 2019, 06:27 PM ISTUpdated : Apr 27, 2019, 06:35 PM IST
‘ಕೈ’ ಬಿಟ್ಟು ಬಂದ ನಾಯಕಿಗೆ ‘ಸೇನೆ’ಯಲ್ಲಿ ಪ್ರಮುಖ ಸ್ಥಾನ

ಸಾರಾಂಶ

ಕಾಂಗ್ರೆಸ್ ಪಕ್ಷದ ಪ್ರಭಾವಿ ಸ್ಥಾನ ತೊರೆದು ಶಿವಸೇನೆ ಸೇರಿದ್ದ ನಾಯಕಿಗೆ ಶಿವಸೇನೆ ಸಹ ಅಷ್ಟೆ ಪ್ರಮುಖವಾದ ಸ್ಥಾನ ನೀಡಿದೆ.

ಮುಂಬೈ[ಏ. 27]  ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರೆ ಸ್ಥಾನ ತೊರೆದು ಶಿವಸೇನೆ ಸೇರಿದ್ದ ಪ್ರಿಯಾಂಕಾ ಚತುರ್ವೇದಿ ಅವರಿಗೆ ಮಹತ್ವದ ಜವಾಬ್ದಾರಿ ಒಂದನ್ನು ನೀಡಲಾಗಿದೆ.

ಪ್ರಿಯಾಂಕಾ ಅವರನ್ನು ಶಿವಸೇನೆಯ ಉಪನೇತಾ ಆಗಿ ನೇಮಿಸಲಾಗಿದೆ. ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿದ್ದಕ್ಕೆ ಪ್ರಿಯಾಂಕಾ ಧನ್ಯವಾದ ಹೇಳಿದ್ದಾರೆ.

ಪ್ರಿಯಾಂಕಾ ಶಿವಸೇನೆ ಸೇರಿದ್ದು ಯಾಕೆ?

ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಪ್ರಿಯಾಂಕಾ ಈ ಬಗ್ಗೆ  ಟ್ವೀಟ್‌ ಮಾಡಿ ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದರು.  ನಂತರ ಶಿವಸೇನೆ ಜಾಯಿನ್ ಆಗಿದ್ದರು.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!