ರಕ್ಷಣಾ ಸಚಿವೆ ಸಮ್ಮುಖ ಬಿಜೆಪಿ ಸೇರಿದ ಮಾಜಿ ಸೇನಾಧಿಕಾರಿಗಳು

Published : Apr 27, 2019, 08:46 PM IST
ರಕ್ಷಣಾ ಸಚಿವೆ ಸಮ್ಮುಖ ಬಿಜೆಪಿ ಸೇರಿದ ಮಾಜಿ ಸೇನಾಧಿಕಾರಿಗಳು

ಸಾರಾಂಶ

ಒಂದು ಕಡೆ ಪಕ್ಷಂತರ ಪರ್ವ ನಡೆಯುತ್ತಿದ್ದರೆ ಇನ್ನೊಂದು  ಕಡೆ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದ ಮಾಜಿ ಯೋಧರು ರಾಜಕಾರಣಕ್ಕೆ ಧುಮುಕುತ್ತಿದ್ದಾರೆ.

ನವದೆಹಲಿ[ಏ. 27]  ಸೇನೆಯಿಂದ ನಿವೃತ್ತಿ ಪಡೆದಿರುವ 7ಜನ ಅಧಿಕಾರಿಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮುಖದಲ್ಲಿಯೇ ಬಿಜೆಪಿ ಸೇರಿದ್ದಾರೆ. ಸೈನ್ಯದಲ್ಲಿದ್ದು ಬಂದವರು ಪಕ್ಷ ಸೇರಿರುವುದು ಹೊಸ ಬಲ ತಂದಿದೆ. ದೇಶದ ರಕ್ಷಣಾ ವಿಚಾರಕ್ಕೆ ಸಂಬಂಧಿಸಿ ಇವರು ನಮಗೆ ಮಾರ್ಗದರ್ಶನ ನೀಡಬಲ್ಲರು  ಎಂದು ನಿರ್ಮಾಲಾ ಹೇಳಿದರು.

ಲೆಫ್ಟಿನೆಂಟ್ ಜನರಲ್ ಆಗಿದ್ದ ಜೆಬಿಎಸ್ ಯಾದವ್, ಎಸ್.ಕೆ.ಪಾಟ್ಯಾಲ್, ಮಿಲಿಟರಿ ಗುಪ್ತದಳದ ವಿಭಾಗದಲ್ಲಿ ಡೈರೆಕ್ಟರ್ ಜನರಲ್ ಆಗಿದ್ದ ಆರ್. ಎನ್.ಸಿಂಗ್, ಸುನೀತ್ ಕುಮಾರ್, ಆರ್.ಕೆ. ತ್ರಿಪಾಠಿ, ನವನೀತ್ ಮಾಗೋನ್ ಬಿಜೆಪಿ ಸೇರಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!