ಮೋದಿ ಕಾಲೆಳೆದ ರಮ್ಯಾಗೆ ಬುಲೆಟ್ ಪ್ರಕಾಶ್ ತಿರುಗೇಟು!

Published : Apr 29, 2019, 03:45 PM ISTUpdated : Apr 29, 2019, 04:03 PM IST
ಮೋದಿ ಕಾಲೆಳೆದ ರಮ್ಯಾಗೆ ಬುಲೆಟ್ ಪ್ರಕಾಶ್ ತಿರುಗೇಟು!

ಸಾರಾಂಶ

ಪ್ರಧಾನಿ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿದ ಮಾಜಿ ಸಂಸದೆ ರಮ್ಯಾ| ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಟ ಬುಲೆಟ್ ಪ್ರಕಾಶ್ ತಿರುಗೇಟು| ಮಾತಿನ ಛಾಟಿ ಬೀಸಿ, ವಿಡಿಯೋ ಮೂಲಕ ಉತ್ತರಿಸುತ್ತೇನೆಂದ ಬುಲೆಟ್ ಪ್ರಕಾಶ್.

ಬೆಂಗಳೂರು[ಏ,.29]: ಸದಾ ತಮ್ಮ ಟ್ವೀಟ್ ಗಳಿಂದ ಟ್ರೋಲ್ ಆಗುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ನಟಿ ರಮ್ಯಾಗೆ ಬುಲೆಟ್ ಪ್ರಕಾಶ್ ತಿರುಗೇಟು ನೀಡಿದ್ದಾರೆ. 

ಹೌದು ಇಂದು ಸೋಮವಾರ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ, ಪ್ರಧಾನಿ ಮೋದಿ ಪುಟ್ಟ ಮಗುವಿನ ಕಿವಿ ಹಿಡಿದಿರುವ ಫೋಟೋ ಹಾಗೂ ಹಿಟ್ಲರ್ ಮಗುವಿನ ಕಿವಿ ಹಿಡಿದ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಈ ಮೂಲಕ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿದ್ದರು. ಈ ಟ್ವೀಟ್ ಮೋದಿ ಅಭಿಮಾನಿಗಳ ಆಕ್ರೊಶಕ್ಕೆ ಕಾರಣವಾಗಿತ್ತು.

ಇದೀಗ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟ ಬುಲೆಟ್ ಪ್ರಕಾಶ್ ರಮ್ಯಾಗೆ ತಿರುಗೆಟು ನೀಡುತ್ತಾ 'ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ ನಾಳೆ ವೀಡಿಯೋ ಮೂಲಕ ಉತ್ತರ ಕೊಡುತ್ತಿನಿ’ ಎಂದಿದ್ದಾರೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಈಗಾಗಲೇ ಮುಗಿದಿದ್ದು, ರಾಜ್ಯದ ಜನತೆ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಹೀಗಿದ್ದರೂ ರಾಜಕೀಯ ಮುಖಂಡರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಾಲೆಳೆಯುತ್ತಿರುವುದನ್ನು ಮಾತ್ರ ನಿಲ್ಲಿಸಿಲ್ಲ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಬುಲೆಟ್ ಪ್ರಕಾಶ್ ನಾಳೆ ಮಂಗಳವಾರ ಏನೆಂದು ಉತ್ತರಿಸಬಹುದು ಎಂಬುವುದೇ ಕುತೂಹಲ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!