‘ಬದಲಾವಣೆ ಸೂಚನೆ ನೀಡಿದ ಸಿಎಂ ; ಮತ್ತೆ ಬಿಎಸ್ ವೈ ಮುಖ್ಯಮಂತ್ರಿ’

Published : Apr 29, 2019, 03:28 PM ISTUpdated : Apr 29, 2019, 03:31 PM IST
‘ಬದಲಾವಣೆ ಸೂಚನೆ ನೀಡಿದ ಸಿಎಂ ; ಮತ್ತೆ ಬಿಎಸ್ ವೈ ಮುಖ್ಯಮಂತ್ರಿ’

ಸಾರಾಂಶ

ಲೋಕಸಭಾ ಚುನಾವಣೆ ಬೆನ್ನಲ್ಲೇ ಬದಲಾವಣೆ ಗಾಳಿಯೊಂದು ಬೀಸಲಿದೆ. ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ. 

ಬೀದರ್ : ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ರಾಜ್ಯವೀಗ  ವಿಧಾನಸಭಾ ಉಪ ಚುನಾವಣೆಗೆ ಸಜ್ಜುಗೊಂಡಿದೆ. ವಿವಿಧ ಪಕ್ಷಗಳ ನಾಯಕರು ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ.  

ವಿಧಾನಸಭಾ ಉಪ ಚುನಾವಣೆ ನಡೆಯುತ್ತಿರುವ ಚಿಂಚೋಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡ ವಿ. ಸೋಮಣ್ಣ ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ, ರಾಜ್ಯದಲ್ಲಿ ಬಿಎಸ್ ವೈ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಬದಲಾವಣೆ ಗಾಳಿ ಬಿಸುತ್ತಿದೆ. ಇದಕ್ಕೆ ಹಲವು ರೀತಿಯ ಉದಾಹರಣೆಗಳು ಸಿಗುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜೊತೆಗೆ ಸಭೆ ನಡೆಸಿದ್ದು, ಸಭೆಯಿಂದ ಅಸಮಾಧಾನಗೊಂಡು ಕುಮಾರಸ್ವಾಮಿ ಅವರು ಹೊರ ನಡೆದಿರುವುದು. 

ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಇಂತಹ ಬೆಳವಣಿಗೆಗಳು ಬದಲಾವಣೆಗೆ ಉತ್ತಮ ಉದಾಹರಣೆಯಾಗಿದೆ. ಅಲ್ಲದೇ ಈ ಮೂಲಕ ಅವರು ಬೇರೆ ಕರೆಗೆ ಹೆಜ್ಜೆ ಇಡುವ ಸೂಚನೆಯನ್ನು ನೀಡಿದಂತಾಗಿದೆ ಎಂದು ಬಿಜೆಪಿ ಮುಖಂಡ ಸೋಮಣ್ಣ ಹೇಳಿದರು.  

ಇನ್ನು ಲೋಕಸಭಾ ಚುನಾವಣಾ ಫಲಿತಾಂಶ ಮೇ 23ಕ್ಕೆ  ಪ್ರಕಟವಾಗಲಿದ್ದು, ಫಲಿತಾಂಶ ಬಂದ ಮೇಲೆ ಮೋದಿ ಮತ್ತೆ ಪ್ರಧಾನಿಯಾಗಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!