ಹೊಲದಲ್ಲಿ ಬೆಂಕಿ: ನೀರು ಸೇದಿ ಬೆಂಕಿ ನಂದಿಸಿದ ಸ್ಮೃತಿ!, ವಿಡಿಯೋ ವೈರಲ್

Published : Apr 29, 2019, 02:27 PM IST
ಹೊಲದಲ್ಲಿ ಬೆಂಕಿ: ನೀರು ಸೇದಿ ಬೆಂಕಿ ನಂದಿಸಿದ ಸ್ಮೃತಿ!, ವಿಡಿಯೋ ವೈರಲ್

ಸಾರಾಂಶ

ಲೋಕಸಭಾ ಚುನಾವಣೆಯ ಕಾವೇರಿದ ಪ್ರಚಾರದ ನಡುವೆ, ಹೊಲವೊಂದಕ್ಕೆ ಬೆಂಕಿ ತಗುಲಿದೆ ಎಂಬ ಸುದ್ದಿ ತಿಳಿದ ಅಮೇಠಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ತನ್ನೆಲ್ಲಾ ಕಾರ್ಯಕ್ರಮವನ್ನು ಮೊಟಕುಗಿಳಿಸಿ ದೌಡಾಯಿಸಿದ್ದಾರೆ. ಬೆಂಕಿ ಅವಘಡ ಸಂಭವಿಸಿದ ಸ್ಥಳದಲ್ಲಿ ತಾನೇ ಖುದ್ದು ನೀರು ಸೇದಿ ಬೆಂಕಿ ನಂದಿಸಲು ಕೈ ಜೋಡಿಸಿದ್ದಾರೆ.

ಅಮೇಠಿ[ಏ.29]: ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆಯ ನಡುವೆಯೇ ಕೆಂದ್ರ ಸಚಿವೆ ಹಾಗೂ ಅಮೇಠಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ 'ಅಗ್ನಿಶಾಮಕ ದಳ ಸಿಬ್ಬಂದಿ' ಅವರತಾರ ತಾಳಿದ್ದಾರೆ. ಅಮೇಠಿಯ ಮುಂಶೀಗಂಜ್ ನ ಹಳ್ಳಿಯೊಂದರಲ್ಲಿ ಅಗ್ನಿ ಅವಘದ ನಡೆದಿರುವ ಸುದ್ದಿ ಜಕೇಳಿದ ಸ್ಮೃತಿ ಇರಾನಿ ಚುನಾವಣಾ ಪ್ರವಾರ ನಿಲ್ಲಿಸಿ ಹಳ್ಳಿಯೆಡೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಅಲ್ಲಿ ತಲುಪುತ್ತಿದ್ದಂತೆಯೇ ತಾವೇ ಖುದ್ದು ಬೋರ್ ವೆಲ್ ನೀರು ಸೇದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಕೈಗೂಡಿಸಿದ್ದಾರೆ.

ಸಾಮಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಸಚಿವೆ ತಾವೇ ಖುದ್ದು ನೀರು ಸೇದಿ ಎಲ್ಲರನ್ನೂ ಬೆಂಕಿ ನಂದಿಸುವ ಕಾರ್ಯದಲ್ಲಿ ಕೈಗೂಡಿಸಲು ಹುರುದುಂಬಿಸುತ್ತಿರುವುದು ಹಾಗೂ ಅಗ್ನಿಶಾಮಕ ದಳಕ್ಕೆ ಕೂಡಲೇ ಸ್ಥಳಕ್ಕಾಗಮಿಸುವಂತೆ ಆದೇಶ ನೀಡುವುದನ್ನೂ ನೋಡಬಹುದು. ಇಲ್ಲಿನ ಗೋಧಿ ಹೊಲದಲ್ಲಿ ಬೆಂಕಿ ತಗುಲಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

2014ರಲ್ಲಿ ಸ್ಮೃತಿ ಇರಾನಿ ಅಮೇಠಿ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಭಾರೀ ಪೈಪೋಟಿ ನೀಡಿದ್ದ ಇರಾನಿ ಕೆಲವೇ ಅಂತರದ ಮತಗಳಿಂದ ಸೋಲುಂಡಿದ್ದರು. ಈ ಬಾರಿ ಮತ್ತೊಮ್ಮೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿದ್ದು, ಮತದಾರ ಯಾರನ್ನು ಗಡಲ್ಲಿಸುತ್ತಾನೆ ಕಾದು ನೋಡಬೇಕು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!