
ದೇಶಾದ್ಯಂತ ಚುನಾವಣೆ ಆರಂಭವಾಗಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದಿದೆ. ಎರಡನೇ ಹಂತದ ಚುನಾವಣೆ ಎ.18ರಂದು ನಡೆಯಲಿದೆ.
ಈಗಲೂ ಮತದಾನದ ಬಗ್ಗೆ ಅಸಡ್ಡೆ ತೊರುವ ಕೆಲಮಂದಿಯಿದ್ದಾರೆ. ಮತದಾನ ಮಾಡುವ ಎಲ್ಲಾ ವ್ಯವಸ್ಥೆಯಿದ್ದರೂ, ರಜಾದಿನವನ್ನು ಮೋಜು-ಮಸ್ತಿ, ಪ್ರವಾಸ ಮಾಡಿ ಕಳೆಯುವವರಿದ್ದಾರೆ.
ಮತದಾನದ ಬಗ್ಗೆ ಜಾಗೃತಿ ಸಮಯದ ಬೇಡಿಕೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ, ಸರ್ಕಾರ, ಹಾಗೂ ಖಾಸಗಿ ಸಂಸ್ಥೆಗಳು ಕೂಡಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ.
ವಿಭಿನ್ನವಾದ ಜಾಹೀರಾತುಗಳಿಂದ ವೀಕ್ಷಕರ ಮನಸೂರೆಗೊಳಿಸುವ ಸ್ಯಾಮ್ಸೊನೈಟ್, ಇದೀಗ ಹೊಸ ಜಾಹೀರಾತೊಂದನ್ನು ಬಿಡುಗಡೆಮಾಡಿದೆ. "EkDinKiChutti" (ಒಂದು ದಿನದ ರಜೆ) ಎಂಬ ಶೀರ್ಷಿಕೆಯೊಂದಿಗೆ ಹೊರತರಲಾದ ಈ ವಿಡಿಯೋ ನೀವೂ ನೋಡಿ, ಆನಂದಿಸಿ, ಇತರರೊಂದಿಗೂ ಹಂಚಿಕೊಳ್ಳಿ....