’ರಾಹುಲ್ ಗಾಂಧಿ ಸೆಕ್ಯುರಿಟಿ ಬಗ್ಗೆ ಮೋದಿ ಸರ್ಕಾರ ಗಮನ ಹರಿಸುತ್ತಿಲ್ಲ’

By Web DeskFirst Published Apr 12, 2019, 1:20 PM IST
Highlights

ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿಯ ಹಣೆಯ ಭಾಗಕ್ಕೆ ಹಸಿರು ಬಣ್ಣದ ಲೇಸರ್ ಲೈಟ್ ಬಿದ್ದದ್ದಕ್ಕೆ ಕೇಂದ್ರ ಎಸ್‌ಜಿಪಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದೇ ಕಾರಣ ಎಂದು ಶಾಂತಿನಗರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹ್ಯಾರಿಸ್ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರು (ಏ. 12): ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿಯ ಹಣೆಯ ಭಾಗಕ್ಕೆ ಹಸಿರು ಬಣ್ಣದ ಲೇಸರ್ ಲೈಟ್ ಬಿದ್ದದ್ದಕ್ಕೆ ಕೇಂದ್ರ ಎಸ್‌ಜಿಪಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದೇ ಕಾರಣ ಎಂದು ಶಾಂತಿನಗರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹ್ಯಾರಿಸ್ ಗಂಭೀರ ಆರೋಪ ಮಾಡಿದ್ದಾರೆ. 

ನಿನ್ನೆ ಮಂಡ್ಯದಲ್ಲಿ ಸಿಎಂ ಆದೇಶ; ಇಂದಿನಿಂದಲೇ ಜಾರಿ!

ಮಡಿಕೇರಿಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯ ಶಂಕರ್ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಕ್ಕಂದಿನಿಂದಲೂ ಸೆಕ್ಯೂರಿಟಿಯಲ್ಲೇ ಬೆಳೆದ ರಾಹುಲ್ ಗಾಂಧಿಯವರ ಸೆಕ್ಯೂರಿಟಿಯ ಬಗ್ಗೆ ಮೋದಿ ಸರ್ಕಾರ ಗಮನ ಹರಿಸುತ್ತಿಲ್ಲ. ಆಗಾಗ ಅವರ ಸೆಕ್ಯೂರಿಟಿ ಕಡಿಮೆ ಮಾಡುತ್ತಿದೆ. ಇದೆಲ್ಲದ್ದರಿಂದಲೇ ಇಂತಹ ಘಟನೆ ನಡೆದಿದೆ ಎಂದು ಹ್ಯಾರೀಸ್ ಆರೋಪಿಸಿದ್ದಾರೆ. 

ಐಟಿ, ಈಡಿ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ಮೋದಿ ಸರ್ಕಾರ ಈ ವಿಚಾರದಲ್ಲೂ ಹಾಗೆ ಮಾಡಿದೆ. ಮೋದಿ ಸರ್ಕಾರಕ್ಕೆ ಸೋಲುವ ಭಯ ಕಾಡುತ್ತಿದ್ದು ಅವರು ಈಗ ಏನು ಮಾಡುವುದಕ್ಕೂ ರೆಡಿಯಾಗಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಕಾಶ್ ರೈ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರೋ ಹ್ಯಾರಿಸ್, ಪ್ರಕಾಶ್ ರೈ ನಮ್ಮ ಆತ್ಮೀಯ ಸ್ನೇಹಿತರು. ಅವರಿಗೆ ಸ್ಪರ್ಧೆ ಮಾಡದಂತೆ ಮನವಿ ಮಾಡಿದ್ದೆವು. ಆದರೆ ಅವರು ತಮ್ಮ ನಿಲುವನ್ನು ಬದಲಿಸಲು ತಯಾರಿಲ್ಲ ಅಂತ ಹೇಳಿದ್ರು ಅಂತ ಹ್ಯಾರೀಸ್ ಹೇಳಿದ್ದಾರೆ. 

click me!