ಲೋಕಸಮರದ ಒಂದೊಂದೆ ಹಂತದ ಚುನಾವಣೆಗಳು ದೇಶದಲ್ಲಿ ನಡೆಯುತ್ತಿವೆ. ದಕ್ಷಿಣಭಾರತದ ಕೆಲವು ರಾಜ್ಯಗಳಲ್ಲಿ ಮತದಾನ ಸಂಪೂರ್ಣವಾಗಿ ಮುಗಿದೂ ಇದೆ. ಈ ನಡುವೆ ಪೂಜೆ-ಪುನಸ್ಕಾರ, ಹೋಮ ಹವನಗಳು ನಡೆಯುತ್ತಿವೆ.
ಹಾವೇರಿ[ಮಾ. 05] ಈ ದೇಶದಲ್ಲಿ ವಿವಿಧ ಕಾರಣಕ್ಕೆ ಜನರು ದೇವರಿಗೆ ಹರಕೆ ಹೊತ್ತು ಸೇವೆ, ಪೂಜೆ, ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ. 5 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ರಾಷ್ಟ್ರದ ನೇತೃತ್ವ ವಹಿಸಬೇಕು ಎಂದು ಕರ್ನಾಟಕದ ವೈದ್ಯ ದಂಪತಿ ಹರಕೆ ತೀರಿಸಿ ಬಂದಿದ್ದಾರೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಸೌದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ್ದಾರೆ. ರಾಣೆಬೆನ್ನೂರಿನ ವೈದ್ಯ ದಂಪತಿ. ಡಾ.ನಾರಾಯಣ ಪವಾರ್ ಉರುಳು ಸೇವೆ ಸಲ್ಲಿಸಿದ್ದು ಮೋದಿ ಪ್ರಧಾನಿಯಾಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ರಾಜೀವ್ ಹೊಗಳಿ, ಮೋದಿ ತೆಗಳಿ ಟ್ವೀಟ್ ಮಾಡಿದ್ದ ರಮ್ಯಾಗೆ ಫುಲ್ ಕ್ಲಾಸ್!
ಮೇ. 06 ರಂದು ಉತ್ತರ ಪ್ರದೇಶ, ಜಾರ್ಖಂಡ್,ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಕಡೆ ಲೋಕಸಭಾ ಚುನಾವಣೆಗೆ 5ನೇ ಹಂತದ ಮತದಾನ ನಡೆಯಲಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡಿರುವ ವಾರಣಾಸಿಯಲ್ಲಿ ಮೇ. 19ಕ್ಕೆ ಚುನಾವಣೆ ನಡೆಯಲಿದೆ.