JDSನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ ಎಂದೇಳುತ್ತಲೇ ಜಿಟಿಡಿಗೆ ತಿವಿದ ಸಿದ್ದು..!

Published : May 05, 2019, 06:35 PM IST
JDSನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ ಎಂದೇಳುತ್ತಲೇ ಜಿಟಿಡಿಗೆ ತಿವಿದ ಸಿದ್ದು..!

ಸಾರಾಂಶ

ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಜಿ.ಟಿ.ದೇವೇಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಸಿದ್ದು ಗುದ್ದು ಹೇಗಿದೆ ಮುಂದೆ ಓದಿ...

ಮೈಸೂರು, [ಮೇ.05]: ಈ ಬಾರಿ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಮಯ್ಯ ಹೇಳಿದ್ದಾರೆ.

ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ, ಸಚಿವ ಜಿ.ಟಿ .ದೇವೇಗೌಡ ಅವರು ನಿಜ ಹೇಳಿದ್ದಾರೆ. ಉದ್ಭೂರಿನಲ್ಲಿ ಜೆಡಿಎಸ್‌ನವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ,ಆದರೆ ಅದು ಇಡೀ ಕ್ಷೇತ್ರಕೆ ಅನ್ವಯಿಸುವುದಿಲ್ಲ ಎಂದು ಒಳ-ಒಳಗೆ ಕುದಿಯುತ್ತಿದ್ದರೂ ಮೇಲಿನ ಮಾತಿಗೆ ಸಮರ್ಥನೆಯ ಮಾತುಗಳನ್ನಾಡಿದರು.

ಮೈಸೂರಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಬಿಜೆಪಿಗೆ ವೋಟ್: GTD ಬಾಂಬ್

ಉದ್ಬೂರು ಉದಾಹರಣೆಗೆ ಇಡೀ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತದಾರರು ಇದ್ದಾರೆ. 18 ಲಕ್ಷ ಮತದಾರರಿದ್ದು. ಎಲ್ಲರೂ ಬುದ್ದಿವಂತರಿದ್ದು, 100% ನಾವು ಮೈಸೂರು ಕೊಡಗು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಪರೋಕ್ಷವಾಗಿ ಜಿಟಿಡಿಗೆ ತಿವಿದರು.

ಇದೇ ವೇಳೆ ಸುಮಲತಾ ಕರೆದ ಡಿನ್ನರ್‌ಗೆ ತೆರಳಿದವರ ಮೇಲೆ ಕ್ರಮ ಕೈಗೊಳ್ಳುತ್ತೀರಾ ಎನ್ನುವ ಪ್ರಶ್ನಿಗೆ ಪ್ರತಿಕ್ರಿಯಿಸಿದ ಸಿದ್ದು, ಊಟಕ್ಕೆ ಹೋದವರನ್ನು ಪ್ರಶ್ನಿಸುವುದಕ್ಕೆ ಆಗುತ್ತಾ, ಆ ವಿಚಾರವೆಲ್ಲಾ ಮಾತಾಡೋಕೆ ಆಗುತ್ತಾ ಎಂದರು.

ಕೆಲವು ಕಡೆ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದರು. ಇದು ಮೈತ್ರಿ ನಾಯಕರ ಇರುಸುಮುರುಸಿಗೆ ಕಾರಣವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಸಹ ತಲೆಕೆಡಿಸಿಕೊಂಡಿದ್ದು, ಮೈಸೂರು ಅಭ್ಯರ್ಥಿ ವಿಜಯ ಶಂಕರ್ ಕರೆದು ಸುದೀರ್ಘ ಚರ್ಚೆ ನಡೆಸಿದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!