‘ವೋಟೇ ಹಾಕದ ರಮ್ಯಾ ವೋಟರ್ ಲಿಸ್ಟ್ ಚೆಕ್ ಮಾಡ್ಕೊಳಿ ಅಂಥ ಉಪದೇಶ ಕೊಟ್ರು!’

By Web DeskFirst Published Mar 13, 2019, 5:29 PM IST
Highlights

ಸೋಶಿಯಲ್ ಮೀಡಿಯಾದಲ್ಲಿಯೇ ಸುದ್ದಿ ಮಾಡುವ ಕಾಂಗ್ರೆಸ್ ನಾಯಕಿ ರಮ್ಯಾ ಮಾಡಿರುವ ಟ್ವೀಟ್ ಗೆ  ಬಂದಿರುವ ಪ್ರತಿಕ್ರಿಯೆಗಳನ್ನು ನೋಡಲೇಬೇಕು.

ಬೆಂಗಳೂರು[ಮಾ. 13] ಸದಾ ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಿತ ಟ್ವೀಟ್ ಮಾಡುತ್ತ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ರಮ್ಯಾ ಈ ಸಾರಿ ಒಳ್ಳೆಯ ವಿಚಾರ ಹಂಚಿಕೊಂಡಿದ್ದರೂ ಜನರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. 

ಚುನಾವಣಾ ಆಯೋಗದ ಮನವಿಗೆ ಪೂರಕವಾಗಿ ಟ್ವೀಟ್ ಮಾಡಿದ್ದ ರಮ್ಯಾ, ಯುವಜನರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವಾದಲ್ಲಿ ಈಗಲೇ ನೋಂದಣಿ ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದರು.

ನಡಿಯಕ್ಕಾಗ್ತಿಲ್ಲ ಅಂತಿದ್ದ ರಮ್ಯಾ ದುಬೈನಲ್ಲಿ? ಪೋಟೋ ಒಂದು ವೈರಲ್

ಆದರೆ ಇದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ಕಂಡಿರುವ ರಮ್ಯಾ, ಮೊದಲು ನೀವು ಮತದಾನ ಮಾಡುವುದು ಕಲಿತುಕೊಳ್ಳಿ... ಮೊದಲು ನೀನು ಓಟ್ ಹಾಕಮ್ಮಾ.. ಯಾವ ಚುನಾವಣೆಯಲ್ಲಿ ಮತದಾನ ಮಾಡಿದ್ದೀಯಾ ಹೇಳಮ್ಮಾ? ಎಂದು ಮುಂಯಾದ ಪ್ರಶ್ನೆ ಎದುರಿಸಬೇಕಾಗಿ ಬಂದಿದೆ.

 

All you young people who are eligible to vote, make sure you register to vote. Time is running out. Here’s the link https://t.co/G1GAaAm1gJ Make it count, the future is yours. pic.twitter.com/mEOmImOnfx

— Divya Spandana/Ramya (@divyaspandana)

ನಾಚಿಕೆಯಾಗಬೇಕು ನಿನ್ ಜನ್ಮಿಕ್ಕಿಷ್ಟು, ಮೊದಲು ನೀನು ಓಟ್ ಮಾಡು, ನೀನು ಏನು ಅಂತ ಜನಕ್ಕೆ ಗೊತ್ತು ಪಪ್ಪು ಜೊತೆ ಸೇರಿ ಕೆಟ್ಟು ಕುಲಗೆಟ್ಟು ಹೋಗಿದಿಯ ನೀನು, ನಿಮಗೆ ಈ ಬಾರಿ ಜನ ಮುಟ್ಟಿ ನೋಡ್ಕೋಬೇಕು ಹಂಗೆ ಮಾಡ್ತಾರೆ... ನಿಮಗೆ

— ರಮೇಶ್ (@ramesh4070)

ಇರಲಾರದೆ ಇರುವೆ ಬಿಟ್ಟುಕೊಳ್ಳುವ ಪಂಗಡ ನಿಮ್ಮದು ಅನಿಸುತ್ತದೆ .. ರಮ್ಯಾ ನೀವೆ ವೋಟ್ ಮಾಡಿಲ್ಲ ಹೀಗಿದ್ದಾಗ ಯಂಗ್ ವೋಟರ್ಸ್ ಗೆ ವೋಟ್ ಹಾಕಿ ಎಂದು ಹೇಳುವ ನೈತಿಕ ಹಕ್ಕು ನಿಮಗಿಲ್ಲ .
ಮತದಾನ ಪ್ರತಿ ಪ್ರಜೆಯ ಹಕ್ಕು ಆದರೆ ನೀವೆ ವೋಟ್ ಮಾಡದೆ ಸಂವಿದಾನಾತ್ಮಕ ನಿಯಮವನ್ನು ಉಲ್ಲಂಘಿಸಿದ್ದೀರಿ .ಮೊದಲು ನೀವು ವೋಟ್ ಮಾಡಿ ನಂತರ ಅಡ್ವೈಸ್ ಮಾಡಿ.

— Mamatha Mamatha (@Mamathahoskote7)
click me!