ಪುತ್ರನ ರಾಜಕೀಯ ಭವಿಷ್ಯಕ್ಕೆ ರಾತ್ರೋರಾತ್ರಿ ಜ್ಯೋತಿಷಿ ಮನೆಗೆ ಸಿಎಂ

Published : Mar 13, 2019, 04:26 PM ISTUpdated : Mar 13, 2019, 07:56 PM IST
ಪುತ್ರನ ರಾಜಕೀಯ ಭವಿಷ್ಯಕ್ಕೆ ರಾತ್ರೋರಾತ್ರಿ ಜ್ಯೋತಿಷಿ ಮನೆಗೆ ಸಿಎಂ

ಸಾರಾಂಶ

ಪುತ್ರನ ರಾಜಕೀಯ ಭವಿಷ್ಯ ಹೇಗಿದೆ ಎಂದು ತಿಳಿಯಲು ಸಿಎಂ ಕುಮಾರಸ್ವಾಮಿ ರಾತ್ರೋರಾತ್ರಿ ಖ್ಯಾತ ಜ್ಯೋತಿಷಿ ಮನೆ ಬಾಗಿಲು ಬಡಿದಿದ್ದಾರೆ. ಮಗನ ರಾಜಕೀಯ ಭವಿಷ್ಯದ ಬಗ್ಗೆ ಜ್ಯೋತಿಷಿ ಹೇಳಿದ್ದೇನು..?

ಬೆಂಗಳೂರು (ಮಾ.13): ಈ ಬಾರಿಯ ಲೋಕಸಭಾ ಚುನಾವಣೆಗೆ ದೇವೇಗೌಡ ಮೊಮ್ಮಕ್ಕಳು ಅಖಾಡಕ್ಕಿಳಿದಿದ್ದಾರೆ.ಹಾಸನದಿಂದ ಪ್ರಜ್ವಲ್ ರೇವಣ್ಣ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್​ ನೀಡುವ ಮೂಲಕ ಇವರಿಬ್ಬ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸಿದ್ದಾರೆ. 

"

ಪರಸ್ಥಳದಿಂದ ಬಂದು ಎಲೆಕ್ಷನ್ ಗೆ ನಿಲ್ತಾರೆ ಅನ್ನೋರಿಗೆ HDK ಖಡಕ್ ಉತ್ತರ

ಆದ್ರೆ, ಸಿಎಂ ಕುಮಾರಸ್ವಾಮಿ ಅವರು ಮಗನ ರಾಜಕೀಯ ಭವಿಷ್ಯ ತಿಳಿದುಕೊಳ್ಳು ರಾತ್ರೋರಾತ್ರಿ ಜ್ಯೋತಿಷಿ ಮನೆ ಬಾಗಿಲು ಬಡಿದಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಷ್​ ಸ್ಪರ್ಧೆ ಮಾಡುತ್ತಿರುವುದರಿಂದ ಮಗನ ರಾಜಕೀಯ ಭವಿಷ್ಯದ ಬಗ್ಗೆ ಕುಮಾರಸ್ವಾಮಿ ಆತಂಕಗೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ  ನೆನ್ನೆ (ಮಂಗಳವಾರ) ಕುಮಾರಸ್ವಾಮಿ ಅವರು ಮಗನೊಂದಿಗೆ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕಾನಾಥ್​​ ಗುರೂಜಿ ಅವರನ್ನು ಭೇಟಿಯಾಗಿ, ಮಗನ ರಾಜಕೀಯ ಭವಿಷ್ಯ ಕೇಳಿದ್ದಾರೆ.

ಭೇಟಿ ವೇಳೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಕಷ್ಟ ಎಂದು ದ್ವಾರಕಾನಾಥ್ ಗುರೂಜಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. 

ನಿಖಿಲ್ ಚುನಾವಣೆಗೆ ಸ್ಪರ್ಧೆ ಮಾಡಿಬಿಟ್ಟಿದ್ದಾರೆ. ಈಗ ನಾನು ನಿಖಿಲ್​ಗೆ ಆಶೀರ್ವಾದ ಮಾಡಲೇಬೇಕು. ಅಂತೆಯೇ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ, ಎಂದು ದ್ವಾರಕಾನಾಥ್ ಹೇಳಿದ್ದಾರೆ.ಈ ಮಾತಿನಿಂದ ಸಿಎಂ ಕುಮಾರಸ್ವಾಮಿ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ನಿಖಿಲ್​ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ಕುಮಾರಸ್ವಾಮಿ ತುಂಬಾನೇ ತಲೆಕೆಡಿಸಿಕೊಂಡಿದ್ದರು. ಮೊದಲ ಚಿತ್ರ ‘ಜಾಗ್ವಾರ್​’ಗೋಸ್ಕರ ಸಾಕಷ್ಟು ಹಣವನ್ನು ವೆಚ್ಚ ಮಾಡಿದ್ದರು. ಇದೀಗ ರಾಜಕೀಯದಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎನ್ನುವ ಬಗ್ಗೆ ಕುಮಾರಸ್ವಾಮಿ ಹೊಸ ಚಿಂತೆ ಶುರುವಾಗಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!