ದೇವೇಗೌಡ ಕುಟುಂಬದ ಕಣ್ಣೀರು; ಟ್ವಿಟರ್‌ನಲ್ಲಿ ಟ್ರೋಲ್ ಆಗಿದ್ದು ಹೀಗೆ!

By Web DeskFirst Published Mar 13, 2019, 5:26 PM IST
Highlights
  • ಹಾಸನ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಭಾವುಕ; ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಯ್ತು ದೇವೇಗೌಡ್ರ ಕಣ್ಣೀರು; ತೆನೆ ಹೊತ್ತ ಮಹಿಳೆಯ ತಲೆ ಮೇಲೆ ಇರೊ ಹುಲ್ಲು ಇನ್ನೂ ಒಣಗದಿರುವುದಕ್ಕೆ ಕಾರಣ ಬಹಿರಂಗ! ಹಾಸನದಲ್ಲಿ ಮಳೆಯಿಲ್ಲದೆ ಪ್ರವಾಹ ಬಂತಂತೆ ಹೌದಾ.........?

ಬೆಂಗಳೂರು: ಮೊಮ್ಮಗ ಪ್ರಜ್ವಲ್ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡರು  ಕಣ್ಣೀರು ಹಾಕಿದ್ದಾರೆ. 

ವಿಶೇಷವೆಂದರೆ, ದೇವೇಗೌಡರು ಮಾತ್ರವಲ್ಲದೇ ಅವರ ಇಡೀ ಕುಟುಂಬವೇ ಈ ಸಂದರ್ಭದಲ್ಲಿ ಕಣ್ಣೀರು ಹರಿಸಿದೆ. ದೇವೇಗೌಡರ ಕಣ್ಣೀರು ಬೆಂಬಲಿಗರನ್ನು ಭಾವುಕಗೊಳಿಸಿದರೆ, ಟ್ವಿಟರ್‌ನಲ್ಲಿ ಟ್ರೋಲ್‌ಗೆ ಗುರಿಯಾಗಿದೆ.

ದೇವೇಗೌಡರ ಕಣ್ಣೀರಿಗೆ ವ್ಯಕ್ತವಾದ ಪ್ರತಿಕ್ರಿಯೆ ಹೇಗಿದೆ ನೀವೇ ನೋಡಿ...


 

ಹೊಳೆನರಸೀಪುರದಲ್ಲಿ ಅತಿಯಾಗಿ ಬಂದ ಕಣ್ಣಿರಹೊಳೆ ಇಂದ ಕುಮಾರಧಾರ ಮತ್ತು ನೇತ್ರಾವತಿ ನದಿ ಪ್ರವಾಹ ಅಂಚಿಗೆ ತಲುಪಿದೆ
# ಕಣ್ಣೀರ ಹೊಳೆ#

— kishor shetty (@shettykk)

ಇದು ಬರೀ ಸ್ಯಾಂಪಲ್,, ಇನ್ನೂ ಗುಡುಗು ಸಿಡಿಲು ಸಹಿತ ಭಾರಿ ಪ್ರಮಾಣದಲ್ಲಿ High Definition ನಲ್ಲಿ ಕಣ್ಣೀರಿನ ಕೋಡಿಯೇ ಹರಿಯುತ್ತದೆ..ಎಲ್ಲರೂ ರೆಡಿಯಾಗಿರಿ...

— LOKESH (@LOKESH341)

’ರೈತರ ಆತ್ಮಹತ್ಯೆಗೆ ಅಳಲಿಲ್ಲ, ಯೋಧರ ಸಾವಿಗೆ ಕಣ್ಣೀರಿಲ್ಲ ಚುನಾವಣೆಗೆ ಮಾತ್ರ ಮನೆಮಂದಿಗೆಲ್ಲ ಕಣ್ಣೀರು! 😤😤😤ಜನ ಈಗಲೂ ಮರುಳಾಗುವರೇ?’ 😜😜 ಯೋಚನೆ ಮಾಡಿ

— Anand Hiremani (@ursanand37)

ಚುನಾವಣಾ ಆಯೋಗ ಅಳುವುದನ್ನು ನೀತಿ ಸಂಹಿತೆ ಅಡಿಯಲ್ಲಿ ಅಪರಾಧ ಎಂದು ಭಾವಿಸಿ ಶಿಕ್ಷೆ ಕೊಡಬೇಕು.

ದೊಡ್ಡಗೌಡ್ರ ಕುಟುಂಬ ಅಳುವುದನ್ನೇ ಬಂಡವಾಳ ಮಾಡಿಕೊಂಡು ಜನರನ್ನ ಮಂಗ ಮಾಡ್ತಿದಾರೆ. pic.twitter.com/zvH98kiVrD

— Bims Gokul (@BimsGokul)

ಜೆಡಿಸ ಗೆ ಓಟ್ ಹಾಕಿದ್ದವರಿಗೆ ಕಣ್ಣೀರು ಬಾಗ್ಯ..

— Mahesh pujar🚫 (@mahesh169699)

ಈ ಅಪ್ಪ ಮಕ್ಳ ( )ಕಣ್ಣೀರಿಂದನೇ ಅನ್ಸುತ್ತೆ ಆ ತೆನೆ ಹೊತ್ತ ಮಹಿಳೆಯ ತಲೆಮೇಲೆ ಇರೊ ಹುಲ್ಲು ಇನ್ನೂ ಒಣಗಿಲ್ಲ. ಎಂತಹ ಅದ್ಬುತ.
😂

— Tirumal Naik (@Tirunaiknagu23)

ಗೌಡರ ಕುಟುಂಬದ ಕಣ್ಣೀರು.
ಹಾಸನದ ಪರಿಸ್ಥಿತಿ ಅಯೋಮಯ.
ಮನೆಗಳಿಗೆ ನುಗ್ಗಿದ ನೀರು.
ಜಿಲ್ಲಾಡಳಿತದಿಂದ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ.
ಬರಪೀಡಿತ ಉತ್ತರಕರ್ನಾಟಕ ಪ್ರದೇಶಗಳಿಗೂ ಗೌಡರ ಕುಟುಂಬದ ಭೇಟಿಗಾಗಿ ಜನತೆಯ ಆಗ್ರಹ. pic.twitter.com/la1iUwupOX

— Venky_Adiga (@Anchor_Venky)

ಇಂದು ಜೆಡಿಎಸ್ ನ ಬಾಲಕೃಷ್ಣ, ಸಚಿವ ರೇವಣ್ಣ ಹಾಗೂ ಪ್ರಾದೇಶಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಂದ ಕಣ್ಣಿರ ಧಾರೆ.

ರಾಜ್ಯಾದ್ಯಂತ ಮೋಡ ಕವಿದ ವಾತಾವರಣ ಭಾರಿ ಮಳೆ ಆಗುವ ಸಾಧ್ಯತೆ, ಪ್ರವಾಹ ಭೀತಿ.

— Bims Gokul (@BimsGokul)

ಹಾಸನದಲ್ಲಿ ಮಳೆಯಿಲ್ಲದೆ ಪ್ರವಾಹ ಬಂತಂತೆ ಹೌದಾ.........?

— Sachi_bkr (@BkrSachi)
click me!