ಚುನಾವಣಾ ಕಣದಿಂದ ಹಿಂದೆ ಸರಿದ ನಾಯಕ : ನಾಮಪತ್ರ ವಾಪಸ್

By Web DeskFirst Published Apr 8, 2019, 3:47 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಚುನಾವಣಾ ಕಣದಿಂದ ಅಭ್ಯರ್ಥಿಯೋರ್ವರು ಹಿಂದೆ ಸರಿದಿದ್ದಾರೆ. 

ರಾಯಚೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ  ಬೆನ್ನಲ್ಲೇ ಅಭ್ಯರ್ಥಿಯೋರ್ವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ರಾಯಚೂರಿನಿಂದ  ಸ್ಪರ್ಧೆ ಮಾಡಿದ್ದ ಪಕ್ಷೇತರ ಅಭ್ಯರ್ಥಿ  ರಂಗಪ್ಪ ನಾಯಕ್ ನಾಮಪತ್ರ ವಾಪಸ್ ಪಡೆದಿದ್ದಾರೆ. 

ರಾಯಚೂರಿನಲ್ಲಿ ಏಪ್ರಿಲ್ 23ಕ್ಕೆ ಚುನಾವಣೆ ನಡೆಯಲಿದ್ದು,  ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಸಿದ್ದರು. ಇದೀಗ ಮಾಜಿ ಸಂಸದ ರಾಜಾ ರಂಗಪ್ಪ ನಾಯಕ್ ನಾಮಪತ್ರ ವಾಪಸ್ ಪಡೆದಿದ್ದಾರೆ.  

ಮೈತ್ರಿ ಅಭ್ಯರ್ಥಿ ಬಿ.ವಿ. ನಾಯಕ್  ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ  ರಾಜಾ ರಂಗಪ್ಪ ನಾಯಕ್ ಕಣಕ್ಕೆ ಇಳಿದಿದ್ದರು.  ಸಂಸದೀಯ ನಾಯಕ ಮಲ್ಲಿಕಾರ್ಜು ಖರ್ಗೆ, ಸಚಿವ ಸತೀಶ್ ಜಾರಕಿಹೊಳಿ ಮನವೊಲಿಕೆ ಹಿನ್ನೆಲೆ ನಾಮಪತ್ರ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.

ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ ಎಂದಿದ್ದ ರಾಜಾ ರಂಗಪ್ಪ ನಾಯಕ್ ಈಗ ನಾಮಪತ್ರ ವಾಪಸ್ ಪಡೆದಿದ್ದು, ರಂಗಪ್ಪ ನಾಯಕ್ ಕಣದಿಂದ ಹಿಂದೆ ಸರಿದಿದ್ದರಿಂದ ಮೈತ್ರಿ ಅಭ್ಯರ್ಥಿ ಬಿ.ವಿ. ನಾಯಕ್ ಗೆ ನೀರಾಳವಾಗಿದೆ.

click me!