
ವಡೋದರಾ[ಏ.08]: ನಾನು ರಾಜಕಾರಣಕ್ಕೆ ಬರುವ ಚಿಂತನೆ ಮಾಡಿದಲ್ಲಿ ವಡೋದರಾ ಲೋಕಸಭಾ ಕ್ಷೇತ್ರದಿಂದ 2024ರಲ್ಲಿ ಸ್ಪರ್ಧಿಸುವೆ ಎಂದು ಬಾಲಿವುಡ್ ನಟ ವಿವೇಕ್ ಒಬೇರಾಯ್ ಹೇಳಿದ್ದಾರೆ.
ತೆರೆಗೆ ಬರಲು ಸಿದ್ಧವಾಗಿರುವ ಪ್ರಧಾನಿ ಮೋದಿ ಜೀವನ ಚರಿತ್ರೆ ಆಧಾರಿತ ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರದ ಮೋದಿ ಪಾತ್ರಧಾರಿಯಾಗಿರುವ ವಿವೇಕ ಒಬೇರಾಯ್, ತಮ್ಮ ಈ ಚಿತ್ರದ ಪ್ರಮೋಷನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು. ವಡೋದರಾದಿಂದ ಪಿಎಂ ನರೇಂದ್ರ ಮೋದಿ ಗೆದ್ದಿದ್ದು, ಅವರ ಬಗ್ಗೆ ಅಲ್ಲಿನ ಜನರಿಗೆ ವಿಶೇಷ ಒಲವಿದೆ. ಜಾತಿ ರಾಜಕಾರಣವಿಲ್ಲದೇ ಪ್ರಧಾನಿ ಸ್ಥಾನದ ಎತ್ತರಕ್ಕೇರಿದ್ದು, ವಿಶ್ವದ ದೊಡ್ಡ ನಾಯಕನಾಗಿ ಬೆಳೆದದ್ದು ಸ್ಪೂರ್ತಿದಾಯಕವಾಗಿದೆ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...