'ನನ್ನದು ಪ್ರಧಾನಿಗಳ ಕುಟುಂಬ: ಮೋದಿ ಮಾತ್ರ ಆ ಸ್ಥಾನಕ್ಕೆ ಸೂಕ್ತ'!

Published : Apr 08, 2019, 02:56 PM ISTUpdated : Apr 08, 2019, 04:00 PM IST
'ನನ್ನದು ಪ್ರಧಾನಿಗಳ ಕುಟುಂಬ: ಮೋದಿ ಮಾತ್ರ ಆ ಸ್ಥಾನಕ್ಕೆ ಸೂಕ್ತ'!

ಸಾರಾಂಶ

'ನನ್ನ ಕುಟುಂಬದಲ್ಲಿ ಬಹುತೇಕರು ಪ್ರಧಾನಿಗಳಾಗಿದ್ದವರು'| ನರೇಂದ್ರ ಮೋದಿ ಮಾತ್ರ ಪ್ರಧಾನಿ ಸ್ಥಾನಕ್ಕೆ ಸೂಕ್ತ'| ಕುಟುಂಬ ರಾಜಕಾರಣವನ್ನು ಜರೆದ ವರುಣ್ ಗಾಂಧಿ| ಉತ್ತರಪ್ರದೇಶದ ಪಿಲ್ಬಿಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ| 'ನರೇಂದ್ರ ಮೋದಿ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ'| 'ಬೇರೆ ಯಾವ ಪ್ರಧಾನಿಯೂ ದೇಶಕ್ಕೆ ಇಷ್ಟು ಕೊಡುಗೆ ನೀಡಿಲ್ಲ'| ದೇಶದ ಒಳಿತಿಗಾಗಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವಂತೆ ವರುಣ್ ಗಾಂಧಿ ಮನವಿ|

ಪಿಲ್ಬಿಟ್(ಏ.08): ಕುಟುಂಬ ರಾಜಕಾರಣಕ್ಕೆ ಗುದ್ದು ನೀಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ನನ್ನ ಕುಟುಂಬದ ಬಹುತೇಕರು ಪ್ರಧಾನಿ ಸ್ಥಾನ ಅಲಂಕರಿಸಿದ್ದರು ಆದರೆ ನರೇಂದ್ರ ಮೋದಿ ಮಾತ್ರ ಆ ಸ್ಥಾನಕ್ಕೆ ಅರ್ಹ ವ್ಯಕ್ತಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಉತ್ತರಪ್ರದೇಶದ ಪಿಲ್ಬಿಟ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವರುಣ್ ಗಾಂಧಿ, 'ನನ್ನ ಮುತ್ತಜ್ಜ, ನನ್ನ ಅಜ್ಜಿ, ನನ್ನ ದೊಡ್ಡಪ್ಪ ಕೂಡ ಪ್ರಧಾನಿ ಸ್ಥಾನ ಅಲಂಕರಿಸಿದ್ದರು. ಆದರೆ ಪ್ರಧಾನಿ ಸ್ಥಾನಕ್ಕೆ ಮೋದಿ ಮಾತ್ರ ಘನತೆ ತಂದು ಕೊಟ್ಟಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು, ಈ ಹಿಂದಿನ ಯಾವ ಪ್ರಧಾನಿಯೂ ದೇಶಕ್ಕೆ ಇಷ್ಟು ಕೊಡುಗೆ ನೀಡಿಲ್ಲ ಎಂದು ವರುಣ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ದೇಶವನ್ನು ಕುಟುಂಬ ರಾಜಕಾರಣದಿಂದ ಮುಕ್ತ ಮಾಡಬೇಕಿದ್ದು, ಇದಕ್ಕಾಗಿ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ವರುಣ್ ಗಾಂಧಿ ಮತದಾರರಲ್ಲಿ ಮನವಿ ಮಾಡಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!