
ತಿರುವನಂತಪುರಂ(ಏ.17): ತುಲಾಭಾರ ಸಮಯದಲ್ಲಿ ಕಬ್ಬಿಣದ ಚೈನ್ ಬಿದ್ದು ಗಾಯಗೊಂಡಿರುವ, ತಿರುವನಂತಪುರಂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಪರ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಹೊರ ಬಂದಿರುವ ಶಶಿ ತರೂರ್, ತಲೆಗೆ ಬಟ್ಟೆ ಸುತ್ತಿಕೊಂಡೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ವೇಳೆ ಶಶಿ ತರೂರ್ ಅವರ ಸಮಪರ್ಣಾ ಭಾವ ಎಲ್ಲರಿಗೂ ಆದರ್ಶ ಎಂದು ರಾಹುಲ್ ಗಾಂಧಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ರಾಹುಲ್ ಗಾಂಧಿ ತಿರುವನಂತಪುರಂ ಸಭೆ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಶಶಿ ತರೂರ್, ತಮ್ಮ ಕ್ಷೇತ್ರದಲ್ಲಿ ರಾಹುಲ್ ಪ್ರಚಾರ ನಡೆಸಿದ್ದಕ್ಕೆ ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ.