ಬಿಜೆಪಿ ಸಂಸದರ ಮನೆ, ಕಚೇರಿ ಬಳಿ ಹಣ ಹಂಚಿಕೆ : ವಿಡಿಯೋ ವೈರಲ್

Published : Apr 17, 2019, 12:22 PM IST
ಬಿಜೆಪಿ ಸಂಸದರ ಮನೆ, ಕಚೇರಿ ಬಳಿ ಹಣ ಹಂಚಿಕೆ :  ವಿಡಿಯೋ ವೈರಲ್

ಸಾರಾಂಶ

ಲೋಕಸಭಾ ಚುನಾವಣಾ ಸಮರ ಆರಂಭವಾಗಿದೆ. ಇದೇ ವೇಳೆ ವಿವಿಧ ಈತಿಯ ಹಣ ಹಂಚಿಕೆಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. 

ಬೀದರ್  : ಬೀದರ್ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಚೇರಿ ಬಳಿ ಹಣ ಹಂಚಿಕೆ ಮಾಡುತ್ತಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 

ಬಿಜೆಪಿ ಸಂಸದ ಖೂಬಾ ಕಚೇರಿ ಬಳಿಯೇ ಹಣ ಹಂಚುತ್ತಿದ್ದು, ಅವರ ಪಿಎ ಅಮರ್ ಎಂಬಾತ ನೋಟುಗಳನ್ನು ಹಂಚುತ್ತಿದ್ದರು ಎನ್ನಲಾಗಿದೆ. 

ಖೂಬಾ ಮನೆ ಹಾಗೂ ಕಚೇರಿ ಬಳಿ ಹಣ ಹಂಚಿಕೆ ಮಾಡುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಯುವ ಮೋರ್ಚಾ ಫೇಸ್ ಬುಕ್ ಪೇಜ್ ನಲ್ಲಿ ಹಣ ಹಂಚಿಕೆ ವಿಡಿಯೋವನ್ನು ಅಪ್ ಲೋಡ್ ಮಾಡಲಾಗಿದೆ. 

ಹಣದ ಬಲ, ಹೆಂಡದ ಬಲ, ತೋಳ ಬಲದಿಂದ ಕಾಂಗ್ರೆಸ್ ಚುನಾವಣೆ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ಬಿಎಸ್ ವೈ ನೀಡಿದ್ದ ಹೇಳಿಕೆಯನ್ನು ಸೇರಿಸಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 

ಜಿದ್ದಾಜಿದ್ದಿನ ಹಣಾ ಹಣಿಯಲ್ಲಿ ಇಷ್ಟು ದಿನ ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದ್ದ ಬೀದರ್ ಕ್ಷೇತ್ರ ಇದೀಗ ವಿಡಿಯೋ ವಾರ್ ಗೆ ಸಾಕ್ಷಿಯಾಗಿದೆ. 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!